ದರ್ಶನ್-ಕಿಚ್ಚ ಸುದೀಪ್ ಒಟ್ಟೊಟ್ಟಿಗೆ ತೆರೆ ಮೇಲೆ ಪ್ರಪ್ರಥಮ..!

ಪೈಲ್ವಾನ್​ ಸಿನಿಮಾ ರಿಲೀಸ್​ ಡೇಟ್ ಅನೌನ್ಸ್ ಬೆನ್ನಲ್ಲೇ ಮುನಿರತ್ನ ಕುರುಕ್ಷೇತ್ರ ರಿಲೀಸ್​ ಡೇಟ್​ ಕೂಡ ಫೈನಲ್​ ಆಗಿದೆ. ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ದುರ್ಯೋಧನ ವರ್ಸಸ್ ಪೈಲ್ವಾನ್​ ಫೈಟ್ ನಡೆಯಲಿದೆ.

ಮುನಿರತ್ನ ಕುರುಕ್ಷೇತ್ರ ಕಳೆದ ಒಂದೂವರೆ ವರ್ಷದಿಂದ ಸದ ಸುದ್ದಿಯಲ್ಲೀರುವ ಅದ್ಧೂರಿ ಸಿನಿಮಾ. ಪ್ರಧಾನ ಭೂಮಿಕೆಯಲ್ಲಿ ದರ್ಶನ್ , ವಿಶೇಷ ಪಾತ್ರಗಳಲ್ಲಿ ಅಂಬರೀಶ್ , ಅರ್ಜುನ್ ಸರ್ಜಾ, ರವಿಚಂದ್ರನ್ , ಶಶಿಕುಮಾರ್ , ನಿಖಿಲ್ ಕುಮಾರ್ , ರವಿಶಂಕರ್, ಸೋನು ಸೂದ್ ಹೀಗೆ ಹೇಳುತ್ತಾ ಹೋದ್ರೆ ದೊಡ್ಡ ಸ್ಟಾರ್ ದಂಡೇ ಇರುವ ಅದ್ಧೂರಿ 3ಡಿ ಮತ್ತು 2ಡಿ ಸಿನಿಮಾ.. ಮುನಿರತ್ನ ತಾವೇ ಕಥೆ ಬರೆದು ಕೋಟಿ ಕೋಟಿ ಬಂಡವಾಳ ಸುರಿದು ನಿರ್ದೇಶಕ ನಾಗಣ್ಣನವರ ಬಳಿ ಆ್ಯಕ್ಷನ್ ಕಟ್ ಹೇಳಿಸಿದ್ದಾರೆ. ಈ ಅಮೋಘ ದೃಶ್ಯ ವೈಭವವನ್ನು ಪ್ರೇಕ್ಷಕರ ಮುಂದೆ ಇಡಲು ಪಕ್ಕಾ ಡೇಟ್ ಫಿಕ್ಸ್ ಮಾಡೇ ಬಿಟ್ಟಿದ್ದಾರೆ. ಆ ಡೇಟೇ ಆಗಸ್ಟ್ 9, 2019.

ರಾಜಕೀಯ ಮತ್ತು ಸಿನಿಮಾರಂಗ ಈ ಎರಡರಲ್ಲು ಸಕ್ರಿಯವಾಗಿರೋರು ಮುನಿರತ್ನ. ಕನ್ನಡ ಸಿನಿಮಾ ಪರಭಾಷ ಸಿನಿಮಾಗಳಿಗಿಂತ ಏನು ಕಡಿಮೆ ಇಲ್ಲ ಎಂದು ತೋರಿಸುವ ಸಲುವಾಗಿ, ಕನ್ನಡದಲ್ಲಿಯೂ ಬಿಗ್ ಬಜೆಟ್ ಸಿನಿಮಾ ಮಾಡುವ ಕನಸಿನಿಂದ ನಿರ್ಮಾಣ ಮಾಡಿರುವ ಚಿತ್ರ ಮುನಿರತ್ನ ಕುರುಕ್ಷೇತ್ರ. ಇಂತಹ ಬಿಗ್ ಮೂವಿ ತಡವಾಗಿದ್ದಕ್ಕೆ ಕಾರಣ ಒಂದು ಎಲೆಕ್ಷನ್ ಮತ್ತೊಂದು 3ಡಿ ಸೆಲೆಕ್ಷನ್. ಬೆಂಗಳೂರು, ಚೆನ್ನೈ, ಕೊಚ್ಚಿ, ಆಂಧ್ರ ಹಾಗೂ ಮುಂಬೈ ನಗರದಲ್ಲಿ ಕುರುಕ್ಷೇತ್ರ ಚಿತ್ರದ ಸಿಜಿ ವರ್ಕ್ ಆಗಿದೆ. ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಆಗಿದೆ. ಈಗ ಫೈನಲಿ ಐದೈದು ಭಾಷೆಯಲ್ಲಿ ಡಬ್ಬಿಂಗು ಶೂಟಿಂಗ್ ಮಾಡಿಕೊಂಡು ಬರುವ ದಿನಾಂಕವನ್ನು ಚಿತ್ರರಸಿಕರ ಮುಂದೆ ಇಟ್ಟಿದೆ.

ಪೈಲ್ವಾನ್. ಖ್ಯಾತ ಸಿನಿಮಾಟೋಗ್ರಫಸರ್​​ ಕಮ್ ಟ್ಯಾಲೆಂಟೆಡ್ ಡೈರೆಕ್ಟರ್ ಎಸ್​​.ಕೃಷ್ಣ ಕಲ್ಪನೆಯ ಮತ್ತು ನಿರ್ಮಾಣದ ಸಿನಿಮಾ. ಸ್ಯಾಂಡಲ್​ವುಡ್ ಆರಡಿ ಕಟೌಟ್ ಕಿಚ್ಚ ಸುದೀಪ್ ಕುಸ್ತಿ ಪಟುವಾಗಿ , ಕಿಕ್ ಬಾಕ್ಸರ್ ಆಗಿ ಕಾಣಿಸಿಕೊಂಡಿರುವ ಸಿನಿಮಾ ಇದು. ಕನ್ನಡ , ತಮಿಳು , ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಪೈಲ್ವಾನ್ ತನ್ನ ಪವರ್ ಪಿಕ್ಚರ್ ತೋರಿಸಲು ಸಜ್ಜಾಗಿದ್ದಾನೆ. ಚೆನ್ನೈ, ಹೈದ್ರಾಬಾದ್ , ಮುಂಬೈ ನಗರದ ಸ್ಟುಡಿಯೋಗಳಲ್ಲಿ ನೈಜತೆಯ ಸೆಟ್ ಹಾಕಿ ಕುಸ್ತಿ ಕಾಳಗ ನಡೆಸಿದ್ದಾರೆ.

ಕುರುಕ್ಷೇತ್ರ ಹಾಗೂ ಪೈಲ್ವಾನ್ ಸಿನಿಮಾಗಳು ಸಿಜಿ ಮತ್ತು ಅನೇಕ ಕಾರಣಗಳಿಂದ ರಿಲೀಸ್​​ ಡೇಟ್ ಮುಂದುಡಿಕೊಂಡು ಬಂದು ಈಗ ಒಂದೇ ದಿನಕ್ಕೆ ಎರಡು ಸಿನಿಮಾ ತಂಡ ಸಿದ್ದವಾಗಿವೆ ಹಾಕಿವೆ.

ಪ್ರಸ್ತುತ ಸ್ಯಾಂಡಲ್​ವುಡ್​​ನಲ್ಲಿ ಭರ್ಜರಿಯಾಗಿ ಅಭಿಮಾನಿ ಸಮೂಹ ಹೊಂದಿರುವ ಸ್ಟಾರ್ಸ್​​​ ದರ್ಶನ್ ಮತ್ತು ಸುದೀಪ್. ಈ ಮಹಾನ್ ನಟರ ಸಿನಿಮಾಗಳು ಈ ಹಿಂದೆ ಒಮ್ಮೆ ಒಟ್ಟಿಗೆ ತೆರೆಕಂಡಿದ್ವು. ಅದು 2006 ಫೆಬ್ರವರಿ 17ಕ್ಕೆ ದರ್ಶನ್ ನಟಿಸಿದ್ದ ಸುಂಟರಗಾಳಿ ಹಾಗೂ ಸುದೀಪ್ ನಿರ್ದೇಶನದ ಮೈ ಆಟೋಗ್ರಾಫ್. ಆದರೆ ಅವತ್ತು ಈ ಎರಡು ಸಿನಿಮಾಗಳನ್ನು ಅಂದಿನ ಪ್ರೇಕ್ಷಕರು ಗೆಲ್ಲಿಸಿದ್ದಾರೆ..ಈಗ ಅದೇ ರೀತಿ ಕುರುಕ್ಷೇತ್ರ ಹಾಗೂ ಪೈಲ್ವಾನ್ ಚಿತ್ರಗಳೆರಡನ್ನು ಪ್ರೇಕ್ಷಕ ಗೆಲ್ಲಿಸುತ್ತಾನ ಅನ್ನೋದು ಒಂದು ಪ್ರಶ್ನೆ

ಈ ವಿಚಾರದಲ್ಲಿ ಇನ್ನೊಂದು ಹೆಜ್ಜೆ ಮುಂದೊಗಿ ಯೋಚಿಸೋದಾದರೆ ಕುರುಕ್ಷೇತ್ರ ಮತ್ತು ಪೈಲ್ವಾನ್ ಕನ್ನಡದಲ್ಲಿ ಮಾತ್ರ ತೆರೆಕಾಣ್ತಿಲ್ಲ. ದಕ್ಷಿಣ ಭಾರತದ 4 ಭಾಷೆಗಳನ್ನು ಸೇರೆ ಉತ್ತರ ಭಾರತದ ಪ್ರಮುಖ ಭಾಷೆ ಹಿಂದಿಯಲ್ಲಿಯೂ ತೆರೆಕಾಣಲಿದೆ. ಹೀಗಾಗಿ ಇಡೀ ದೇಶವೇ ನಮ್ಮ ಕನ್ನಡ ಮಣ್ಣಿನ ಮಕ್ಕಳ ಸಿನಿಮಾವನ್ನು ಒಪ್ಪಿ ಅಪ್ಪಿ ಮೆರವಣಿಗೆ ಮಾಡ್ತಾರಾ..? ಕೆಜಿಎಫ್ ರೀತಿ ಈ ಎರಡು ಸಿನಿಮಾಗಳು ಸದ್ದು ಗದ್ದಲ ಮಾಡ್ತಾವಾ ಅನ್ನೋದೆ ಕುತೂಹಲ.

ಈಗ ಇಷ್ಟೆಲ್ಲ ಚರ್ಚೆಗೆ ಗ್ರಾಸವಾದ ಕುರುಕ್ಷೇತ್ರ ಸಿನಿಮಾದ ಬಿಡುಗಡೆಯ ಮಾಧ್ಯಮ ಗೋಷ್ಠಿಯನ್ನು ಬಗ್ಗೆ ಮಾತನಾಡೋಣ.. ನಿರ್ಮಾಪಕ ಮುನಿರತ್ನ, ನಿರ್ದೇಶಕ ನಾಗಣ್ಣ, ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು, ಸಂಕಲನಕಾರ ಜೋನಿ ಹರ್ಷ ಹಾಗೂ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಪ್ರೆಸ್ ಮೀಟ್​ನಲ್ಲಿ ಭಾಗವಹಿಸಿ ಸಿನಿಮಾ ರಿಲೀಸ್ ಡೇಟ್ ಕನ್ಫರ್ಮ್ ಮಾಡಿದರು.

ದೊಡ್ಡ ಸಿನಿಮಾಗಳೆಂದ್ರೆ ಸಿನಿಮಾ ರಿಲೀಸ್​​ಗೂ ಮುನ್ನ ಒಂದಷ್ಟು ವ್ಯವಹಾರ ವಹಿವಾಟು ಮಾಡಿ ಖಜಾನೆ ತುಂಬಿಸಿಕೊಂಡಿರುತ್ತೆ. ಈ ವಿಚಾರದಲ್ಲಿ ಕುರುಕ್ಷೇತ್ರ ಕೂಡ ಒಳ್ಳೆಯ ಖಮಾಯಿ ಮಾಡಿದೆ. ನಿರ್ಮಾಪಕ ಮುನಿರತ್ನ ಹೇಳೋ ಪ್ರಕಾರ ಈಗಾಗಲೇ ಕುರುಕ್ಷೇತ್ರ 20ಕೋಟಿ ಲೂಟಿ ಮಾಡಿದೆ. ಹಿಂದಿ ಡಬ್ಬಿಂಗ್ ಸ್ಯಾಟಲೈಟ್ ರೈಟ್ಸ್, ಕನ್ನಡ ಆಡಿಯೋ ರೈಟ್ಸ್ ಹಾಗೂ ಟಿವಿ ರೈಟ್ಸ್ ಎಲ್ಲಾ ಸೇರಿ ಸಿನಿಮಾ ಈಗಾಗಲೇ 20ಕೋಟಿ ದುಡಿದಿದೆಯಂತೆ.

ಎರಡು ದೊಡ್ಡ ಕನ್ನಡದ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗುತ್ತಿರುವ ಬಗ್ಗೆ ಮುನಿರತ್ನರವರ ವಿಶ್ಲೇಷಣೆಯೇ ಬೇರೆ. ಕನ್ನಡದಲ್ಲಿ ಐದೈದು ಸಿನಿಮಾಗಳು ಒಟೋಟ್ಟಿಗೆ ಬರೋ ಈ ಕಾಲದಲ್ಲಿ ಎರಡು ಕನ್ನಡ ಸಿನಿಮಾಗಳು ಬಂದ್ರೆ ಲಾಸ್ ಏನು ಇಲ್ಲ ಎಂದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.