ರಾತ್ರಿ ಮರ್ಡರ್ ಆದ ಯುವಕ, ಮಾರನೇ ದಿನ ಪೊಲೀಸರೆದುರು ಪ್ರತ್ಯಕ್ಷ..!?

ದಾವಣಗೆರೆ: ತನ್ನ ಮರ್ಡರ್ ಆಗಿದೆಯೆಂದು ತಮಾಷೆ ಮಾಡಲು ಹೋಗಿ ಯುವಕನೋರ್ವ ಪೊಲೀಸರ ಅತಿಥಿಯಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆಯ ಯಲ್ಲಮ್ಮ ನಗರದ ನಿವಾಸಿ ಪರಶುರಾಮ್ ಎಂಬಾತ ನಿನ್ನೆ ರಾತ್ರಿ ತನ್ನದೇ ಮೊಬೈಲ್‌ನಿಂದ, ತನ್ನ ಮರ್ಡರ್ ಆಗಿದೆ ಅನ್ನೋ ರೀತಿಯಲ್ಲಿ ಫೋಟೋಗಳನ್ನ ವಾಟ್ಸಾಪ್ ಮಾಡಿ ಮನೆಗೆ ಕಳಿಸಿದ್ದಾನೆ.

ಇದನ್ನ ನಂಬಿದ ಮನೆಯವರು ರಾತ್ರಿಯೆಲ್ಲ ಹುಡುಕಿ ಕೊನೆಗೆ ಬಡಾವಣೆ ಪೋಲಿಸ್ ಸ್ಟೇಷನ್‌ಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಇದರಿಂದ ಗಾಬರೀಗೊಂಡ ಪೊಲೀಸರು ಒಂದು ವಾರದಲ್ಲಿ ದಾವಣಗೆರೆಯಲ್ಲಿ ಇದು ನಾಲ್ಕನೇ ಕೊಲೆ ಎಂದು ಯುವಕನ ಮೃತ ದೇಹಕ್ಕಾಗಿ ಊರೆಲ್ಲಾ ಹುಡುಕಾಡಿದ್ದಾರೆ. ಹೀಗೆ ಊರೆಲ್ಲಾ ಹುಡುಕಿದ ಪೊಲೀಸರಿಗೆ ಕೊಲೆಯಾಗಿದ್ದನೆಂದು ಪೋಟೋ ಹಾಕಿದವನು ಜೀವಂತವಾಗಿ ಸಿಕ್ಕಿದ್ದಾನೆ.

ಗಾರೆ ಕೆಲಸ ಮಾಡುತ್ತಿದ್ದ ಪರಶುರಾಮ್ ಚೆನ್ನಾಗಿಯೇ ಇದ್ದ. ನಿನ್ನೆ ರಾತ್ರಿ ಮನೆಯಿಂದ ಹೋದವನು ತಾನೇ ಮುಖದ ಮೇಲೆ ಕುಂಕುಮ ಹಾಕಿಕೊಂಡು ಕೊಲೆಯಾಗಿರುವ ರೀತಿಯಲ್ಲಿ ಫೋಟೋ ತೆಗೆದು ಮನೆಯವರಿಗೆ ಕಳಿಸಿದ್ದ. ಅದನ್ನು ನೋಡಿದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ಪೋಟೋ ನೋಡಿದ ಪೊಲೀಸರು ಪರಶುರಾಮನ ಮೃತ ದೇಹಕ್ಕಾಗಿ ಹುಡುಕದ ಜಾಗವಿಲ್ಲ. ಆದ್ರೆ ಇವತ್ತು ಸಂಜೆ ಪರುಶುರಾಮ ಜೀವಂತವಾಗಿ ಸಿಕ್ಕಿದ್ದಾನೆ. ಅವನು ಮಾಡಿದ ಹುಚ್ಚಾಟಕ್ಕೆ ಮನೆಯವರಷ್ಟೇ ಅಲ್ಲದೆ ಇಡೀ ಪೋಲಿಸ್ ಇಲಾಖೆಗೆ ಥಂಡಾ ಹೊಡೆಸುವಂತೆ ಮಾಡಿತ್ತು.

ಒಟ್ಟಿನಲ್ಲಿ ಒಂದು ವಾರದಿಂದ ಟೆನ್ಶನ್‌ನಲ್ಲಿದ್ದ ಪೊಲೀಸರಿಗೆ ಪರಶುರಾಮ್ ಡೋಸ್ ನೀಡಿದ್ದಾನೆ. ಪರಶುರಾಮನ ಹುಚ್ಚಾಟದಿಂದ ಪೊಲೀಸರು ಸುಸ್ತಾಗಿ ಹೋಗಿದ್ದಂತೂ ಸತ್ಯ. ಪರಶುರಾಮನ ಈ ಹುಚ್ಚಾಟದ ವಿರುದ್ದ ಪೊಲೀಸರು ಶಿಸ್ತು ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.
ಮಂಜುನಾಥ್ ಜೊತೆ ಪ್ರವೀಣ್ ಬಾಡ ಟಿವಿ 5 ದಾವಣಗೆರೆ

Recommended For You

About the Author: Dayakar

Leave a Reply

Your email address will not be published. Required fields are marked *