‘ಈಶ್ವರಪ್ಪನ ಮುಖ ನೋಡೋಕ್ಕೂ ಲಾಯಕ್ಕಿಲ್ಲ. ಅವರು ಸಿಎಂ ಆಗ್ತಾರಾ?..ಸಾಧ್ಯಾನೇ ಇಲ್ಲ..’

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಜಮೀರ್ ಅಹಮದ್, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈಶ್ವರಪ್ಪ ಮಾತಿಗೆ ಆದ್ಯತೆ ಕೊಡುವ ಅಗತ್ಯವಿಲ್ಲ. ಕೊಚ್ಚೆ ಮೇಲೆ ಕಲ್ಲು ಎಸೆದ್ರೆ ನಮಗೆ ಸಡಿಯುತ್ತೆ ಎಂದು ಹೇಳಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕರಿಗೆ ಕಳ್ಳ-ಸುಳ್ಳ ಎಂದ ಬಗ್ಗೆ ಮಾತನಾಡಿದ ಜಮೀರ್ ಅಹಮದ್ ಖಾನ್, ಕಳ್ಳ, ಸುಳ್ಳ ಅಂತ ಹೇಳೋಕೆ ಅವನ್ಯಾರು.?. ಅವನಿಗೆ ಕಳ್ಳತನ ಮಾಡಿ ಅಭ್ಯಾಸವಿರಬೇಕು. ಎಲ್ಲಾರಿಗೂ ಕಳ್ಳರು ಎನ್ನುತ್ತಿದ್ದಾರೆ. ಈಶ್ವರಪ್ಪ ಮನುಷ್ಯನಾ..? ಎಂದು ಜಮೀರ್ ಪ್ರಶ್ನಿಸಿದ್ದಾರೆ.

ನಾನು ಜೆಡಿಎಸ್‌ನಲ್ಲಿ ಇದ್ದಾಗ ಪಕ್ಷಕ್ಕೆ ನಿಷ್ಠನಾಗಿದ್ದೆ. ಈಗ ಕಾಂಗ್ರೆಸ್‌ನಲ್ಲಿ ಇದ್ದೇನೆ ಸಿದ್ದರಾಮಯ್ಯ ನಮ್ಮ ನಾಯಕ. ಚುನಾವಣೆ ನಂತರ ಯಾವುದೇ ಬದಲಾವಣೆ ಆಗಲ್ಲ.

23ರ ಬದಲು 25ಕ್ಕೆ ಸರ್ಕಾರ ರಚನೆ ಮಾಡಲಿ. ಸರ್ಕಾರ ರಚನೆ ಮಾಡಿದ್ರು ಬಿಎಸ್‌ವೈ ಮನೆಯಲ್ಲಿ ಒಂದು ದಿನ ವಾಚ್ ಮೆನ್ ಕೆಲಸ ಮಾಡಲು ಸಿದ್ದ ಎಂದು ಹೇಳಿದ್ದೆ. ಅದಕ್ಕೆ ನಾನೀಗಲೂ ಬದ್ಧನಾಗಿದ್ದೇನೆ. ಈಶ್ವರಪ್ಪ ಮುಖ ನೋಡಲು ನಾನು ಸಿದ್ದವಿಲ್ಲ. ಈಶ್ವರಪ್ಪ ಸಿಎಂ ಆಗೋದು ಕನಸಿನ ಮಾತು ಹುಬ್ಬಳ್ಳಿಯಲ್ಲಿ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *