ಜೋಡೆತ್ತು ಸಿನಿಮಾ ಬಗ್ಗೆ ನಟ ಯಶ್ ಹೇಳಿದ್ದೇನು..?

ಮಂಡ್ಯ: ಮಂಡ್ಯದ ಕೆರೆಮೇಗಳದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್, ಚುನಾವಣೆ ಮುಗಿದ ಬಳಿಕ ಮೂರ್ನಾಲ್ಕು ಸಲ ಮಂಡ್ಯಕ್ಕೆ ಬಂದಿದ್ದೀನಿ. ಸುಮಲತಾರನ್ನೂ ಕೂಡ ಭೇಟಿ ಮಾಡಿದ್ದೆ. ಅವರೇ ಗೆಲ್ಲೋದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಚುನಾವಣೆ ಮುಗಿದ ಬಳಿಕ ಜೋಡೆತ್ತುಗಳು ಮಂಡ್ಯದಲ್ಲಿ ಕಾಣಿಸ್ತಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯಶ್, ಪ್ರಚಾರಕ್ಕೆ ಬಂದ್ವಿ ಹೋದ್ವಿ. ಅಭ್ಯರ್ಥಿಗಳು ಬರ್ತಿದ್ದಾರಲ್ಲ ಎಂದಿದ್ದಾರೆ. ಅಲ್ಲದೇ, ನಾನು ಮಂಡ್ಯ ರಾಜಕಾರಣಕ್ಕೆ ಬರಲ್ಲ. ಸ್ಪರ್ಧೆ ಕೂಡ ಮಾಡಲ್ಲ. ಸುಮಲತಾ ಗೆದ್ದರೆ ಒಳ್ಳೆಯ ಕೆಲಸ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಜೋಡೆತ್ತು ಸಿನಿಮಾ ಸೆಟ್ಟೇರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯಶ್, ದರ್ಶನ್ ಪ್ರೀತಿಯಿಂದ ಜೋಡೆತ್ತು ಎಂದು ಹೇಳಿದ್ರು. ದರ್ಶನ್ ನನಗಿಂತ ಸೀನಿಯರ್ ನಟ. ದರ್ಶನ್ ಹೇಳಿದ್ದು ತುಂಬಾ ಫೇಮಸ್ ಆಯ್ತು.ಜೋಡೆತ್ತು ಟೈಟಲ್ ರಿಜಿಸ್ಟರ್ ಆಗಿದೆ. ನಾನು ಆ ಸಿನಿಮಾದಲ್ಲಿ ನಟನೆ ಮಾಡಲ್ಲ. ದರ್ಶನ್ ಜೊತೆ ಸಿನಿಮಾ ಮಾಡಬೇಕಂದ್ರೆ ಅವ್ರೊಬ್ಬ ದೊಡ್ಡ ಸ್ಟಾರ್. ಒಳ್ಳೆಯ ಕಥೆ ಸಿಗಬೇಕು. ಒಳ್ಳೆಯ ಕಥೆ ಬಂದ್ರೆ ದರ್ಶನ್ ಜೊತೆ ಸಿನಿಮಾ ಮಾಡ್ತೀನಿ ಎಂದಿದ್ದಾರೆ.

ಅಲ್ಲದೇ, ಕೆಜಿಎಫ್ ಸಿನಿಮಾ ಶೂಟಿಂಗ್ ಶುರುವಾಗ್ತಿದೆ. ನಿಖಿಲ್ ಎಲ್ಲಿದ್ಯಪ್ಪಾ ಸಿನಿಮಾಗೆ ಒಳ್ಳೆಯದಾಗ್ಲಿ. ಫಲಿತಾಂಶ ಬಂದ ದಿನ ಸಾಧ್ಯವಾದ್ರೆ ಮಂಡ್ಯಕ್ಕೆ ಬರ್ತೀನಿ ಎಂದು ಯಶ್ ಹೇಳಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *