ಯಾವ ಯಾವ ಭಾಷೆಯಲ್ಲಿ ರಿಲೀಸ್ ಆಗ್ತಿದೆ ಗೊತ್ತಾ ಕಿಚ್ಚನ ಪೈಲ್ವಾನ್ ಸಿನಿಮಾ..?

ಪೈಲ್ವಾನ್​ ಅಖಾಡದಿಂದ ಅಭಿಮಾನಿಗಳಿಗೆ ಬೊಂಬಾಟ್ ನ್ಯೂಸ್ ಸಿಕ್ಕಿದೆ.. ಸದ್ದಿಲ್ಲದೇ ಪೈಲ್ವಾನ್​​ನ ಸಿಲ್ವರ್​ ಸ್ಕ್ರೀನ್​ ಮೇಲೆ ಕರ್ಕೊಂಡ್​ ಬರ್ತಿರೋ ಕೃಷ್ಣ ಅಂಡ್ ಟೀಂ, ಬಹಳ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್​ಗೆ ಪ್ಲಾನ್ ಮಾಡ್ತಿದೆ.. ಹೇಳಿದ ಸಮಯಕ್ಕೆ ಸರಿಯಾಗಿ ತೆರೆಮೇಲೆ ಕಿಚ್ಚ ಸುದೀಪ್​ ಭುಜ, ತೊಡೆ ತಟ್ಟಿ ಕುಸ್ತಿ ಪಟ್ಟುಗಳನ್ನ ಹಾಕ್ತಿದ್ದಾರೆ..

2000 ಸ್ಕ್ರೀನ್​.. 8 ಭಾಷೆ.. ಪೈಲ್ವಾನ್ ಕುಸ್ತಿ ಕನ್ಫರ್ಮ್..!
ವರಮಹಾಲಕ್ಷ್ಮೀ ಹಬ್ಬಕ್ಕೆ ತೆರೆಮೇಲೆ ಕಿಚ್ಚ ಸುದೀಪ್ ಹವಾ
ಪೈಲ್ವಾನ್​ ಸಿನಿಮಾ ವರಮಹಾಲಕ್ಷ್ಮೀ ಹಬ್ಬಕ್ಕೆ ಬರುತ್ತೆ ಅಂತ ಈಗಾಗಲೇ ಚಿತ್ರತಂಡ ಹೇಳಿದೆ.. ಆ ವಿಚಾರ ಇದೀಗ ಕನ್ಫರ್ಮ್​​​ ಆಗಿದ್ದು, 2000ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ಚಿತ್ರವನ್ನ ರಿಲೀಸ್ ಮಾಡೋ ಮಾಸ್ಟರ್​ ಪ್ಲಾನ್ ನಡೀತಿದೆ.. ಈಗಾಗಲೇ ಕೆಜಿಎಫ್ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್‌ಗೆ​ ರೆಡಿಯಾಗ್ತಿದ್ದು, ಅದನ್ನ ಮೀರಿಸಿ, ಪೈಲ್ವಾನ್​ ಸಿನಿಮಾ ಹೊಸ ಅಧ್ಯಾಯ ಬರೆಯಲಿದೆ..

ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಮರಾಠಿ, ಭೋಜ್​​​​ಪುರಿ, ಬಂಗಾಳಿ ಮತ್ತು ಪಂಜಾಬಿ ಭಾಷೆಗಳಲ್ಲಿ ಪೈಲ್ವಾನ್​ ಸವಾರಿ ಶುರುವಾಗಲಿದೆ.. ಈಗಾಗಲೇ ಡಬ್ಬಿಂಗ್ ಕಾರ್ಯ ಭರದಿಂದ ಸಾಗಿದ್ದು, ಭರ್ಜರಿ ಪ್ರಮೋಷನ್​ಗೂ ಚಿತ್ರತಂಡ ತಯಾರಿ ಶುರು ಮಾಡಿದೆ.. ಹೈದರಾಬಾದ್, ಮುಂಬೈ, ಚೆನ್ನೈನಲ್ಲಿ ಕೆಜಿಎಫ್ ಮಾದರಿಯಲ್ಲಿ ಪ್ರೀ ರಿಲೀಸ್ ಈವೆಂಟ್ ನಡೆಸಲೂ ಚಿಂತನೆ ನಡೀತಿದೆ..

ದೇಶ ವಿದೇಶದಲ್ಲಿ ದೊಡ್ಡ ಅಭಿಮಾನಿ ಬಳಗ ಸಂಪಾದಿಸಿರೋ ನಟ ಸುದೀಪ್.. ಅಭಿನಯ ಚಕ್ರವರ್ತಿಯ ಸಿನಿಮಾಗಳಿಗೆ ಬಂಗಾಳಿ, ಮರಾಠಿಯಲ್ಲೂ ಭಾರೀ ಬೇಡಿಕೆ ಇದೆ.. ಈಗಾಗಲೇ ಪೈಲ್ವಾನ್​ ಡಬ್ಬಿಂಗ್ ರೈಟ್ಸ್​​ಗೆ ಭೋಜ್​ಪುರಿ, ಬಂಗಾಳಿ, ಪಂಜಾಬಿ ಭಾಷೆಗಳಿಂದ ಡಿಮ್ಯಾಂಡ್​​ ಶುರುವಾಗಿದ್ದು, ಎಲ್ಲಾ ಅಂದುಕೊಂಡಂತೆ ಆದ್ರೆ, ಪೈಲ್ವಾನ್​​​​ ಸುದೀಪ್​ ಅಷ್ಠಭಾಷಾ ನಟನಾಗಿ ಹೊರಹೊಮ್ಮಲಿದ್ದಾರೆ..

ಕುರುಕ್ಷೇತ್ರ ಮತ್ತು ಪೈಲ್ವಾನ್ ಮಧ್ಯೆ ಬಾಕ್ಸಾಫೀಸ್ ಫೈಟ್
ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ ಕಿಚ್ಚನ ಪೈಲ್ವಾನ್​​ ಖದರ್
ಕಿಚ್ಚ ಸುದೀಪ್​ ಪೈಲ್ವಾನ್​ ಚಿತ್ರಕ್ಕಾಗಿ ತೂಕ ಇಳಿಸಿ, ದೇಹವನ್ನ ಹುರಿಗಟ್ಟಿಸಿ, ಖಡಕ್ ಲುಕ್​ನಲ್ಲಿ ನಟಿಸ್ತಿದ್ದಾರೆ.. ಚಿತ್ರದಲ್ಲಿ ದೇಸಿ ಸ್ಟೈಲ್​ ಕುಸ್ತಿ ಅಖಾಡದಲ್ಲಿ ಎದುರಾಳಿಗಳಿಗೆ ಮಣ್ಣು ಮುಕ್ಕಿಸಲಿರೋ ಕಿಚ್ಚ, ಬಾಕ್ಸರ್ ಅವತಾರದಲ್ಲಿ ವಿದೇಶಿ ಬಾಕ್ಸರ್​ಗಳಿಗೂ ಪಂಚ್ ಕೊಡಲಿದ್ದಾರೆ.. ಕುರುಕ್ಷೇತ್ರ ಚಿತ್ರವನ್ನ ಸಹ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ತೆರೆಗೆ ತರೋ ಪ್ಲಾನ್ ನಡೀತಿದೆ.. ಆದ್ರೆ, ಎರಡೂ ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಾ, ಅಥವಾ ಯಾವ್ದಾದ್ರೂ ಒಂದು ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗುತ್ತಾ ಕಾದು ನೋಡ್ಬೇಕು..

ಎಂಟ್ರಟ್ರೈನ್​ಮೆಂಟ್ ಬ್ಯೂರೋ ಟಿವಿ5

Recommended For You

About the Author: Dayakar

Leave a Reply

Your email address will not be published. Required fields are marked *