ಶಿವಳ್ಳಿ ಬಗ್ಗೆ ಶಾಕಿಂಗ್ ಸಿಕ್ರೇಟ್ ಬಹಿರಂಗಪಡಿಸಿದ ಸಿದ್ದರಾಮಯ್ಯ..!

ಹುಬ್ಬಳ್ಳಿ : ಕುಂದಗೋಳ ಯಲಿವಾಳದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡಿದ್ದು, ಬಿಜೆಪಿ ವಿರುದ್ಧ ವಾಕ್ಪ್ರಹಾರ ನಡೆಸಿ, ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿಯವರು ಶಿವಳ್ಳಿಯವರ ಖರೀದಿಗೆ ಮುಂದಾಗಿದ್ರು. ಶಿವಳ್ಳಿಗೆ 25ಕೋಟಿ ಆಫರ್ ನೀಡಿದ್ದು, ಈ ಬಗ್ಗೆ ಖುದ್ದು ಶಿವಳ್ಳಿಯವರೇ ನನಗೆ ಹೇಳಿದ್ದರು . ಒಂದು ದಿನ ಬೆಳಗ್ಗೆ ಫೋನ್ ಮಾಡಿ ಈ ಸಂಗತಿ ಹೇಳಿದ್ರು. ಅವರ ಮುಖಕ್ಕೆ ಕ್ಯಾಕರಿಸಿ ಉಗಿಯಿರಿ ಶಿವಳ್ಳಿ ಅವರೇ ಎಂದಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅಲ್ಲದೇ, ಶಿವಳ್ಳಿ ಒಬ್ಬ ರಾಜಕಾರಣಿ ಅಲ್ಲಾ ಅವನು ಜನ ಸೇವಕ. ನಾಲಾಯಕರು , ಮೋಸಗಾರರು , ಸುಳ್ಳುಬುರುಕನ್ನು ತಮ್ಮನ್ನು ಮಾರಾಟ ಮಾಡಿಕೊಳ್ಳುವರನ್ನು ವಿಧಾನಸಭೆಗೆ ಕಳಿಸಬೇಡಿ . ಇಷ್ಟು ದಿನ ಕುರಿ ಕೋಳಿ ಮಾರಾಟ ಮಾಡುತಿದ್ರು , ಆದ್ರೆ ಈಗ ಎಮ್‌ಎಲ್‌ಎಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ .

ಇನ್ನು ಜಾಧವ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಚಿಂಚೊಳಿಯಲ್ಲಿ ಅವರು ಕೋಟಿ ಕೋಟಿ ಕೊಟ್ಟರು. ಇವನು ಮಾರಾಟ ಆದ ಎಂದಿದ್ದಾರೆ.

ಅಲ್ಲದೇ, ಮೋದಿ ಒಬ್ಬ ಸುಳ್ಳು ಬುರುಕ . ಮೋದಿ ದೇಶಕ್ಕೆ ಯಾವುದೇ ಕೆಲಸ ಮಾಡಿಲ್ಲಾ . ರೈತರ ಸಾಲ ಮನ್ನಾ ಮಾಡುವಂತೆ ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಿದ್ದೆ . ಆದ್ರೆ ಜಪ್ಪಯ್ಯಾ ಅಂದ್ರೂ ಸಾಲಮನ್ನಾ ಮಾಡಲಿಲ್ಲಾ . ನಾ ಪರಿ ಪರಿಯಾಗಿ ಕೇಳಿಕೊಂಡೆ . ಮಾತು ಮಾತಿಗೂ ಮೋದಿ ನನ್ನದು 56 ಇಂಚಿನ ಎದೆ ಇದೆ ಎನ್ನುತ್ತಾರೆ. ನಮ್ಮಲ್ಲಿ ಪೈಲ್ವಾನ್‌ಗಳಿಗೂ ಇದಕ್ಕಿಂತ ದೊಡ್ಡ ಎದೆ ಇರ್ತಾವೆ. ಎದೆ ಇದ್ರೆ ಸಾಲದು , ಆ ಎದೆಯಲ್ಲಿ ಬಡವರಬಗ್ಗೆ ಪ್ರೀತಿ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *