‘ನಮ್ಮ ಬಳಿ ಬಂದು ನಾವು ಗಂಡಸರೇ ಅಲ್ಲವೋ ಎಂದು ಪರೀಕ್ಷೆ ಮಾಡಿಕೊಳ್ಳಿ’-ಡಿ.ಕೆ ಶಿವಕುಮಾರ್

ಹುಬ್ಬಳ್ಳಿ: ಸರ್ಕಾರ ಸುಭದ್ರವಾಗಿದೆ ಯಾರಿಂದಲೂ ಈ ಸರ್ಕಾರವನ್ನು ಅಲುಗಾಡಿಸಲು ಆಗಲ್ಲ, ಜನ ಬಿಜೆಪಿಗೆ ಅಧಿಕಾರ ಕೊಟ್ಟಿದರು ಆದರೆ, ಅದನ್ನು ಉಳಿಸಿಕೊಳ್ಳಲಿಲ್ಲ ಎಂದು ಸಚಿವ ಡಿ.ಕೆ ಶಿವಕುಮಾರ್ ಬಿಜೆಪಿ ಮುಖಂಡ ಕೆ.ಎಸ್  ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನವರು ನಾಮರ್ಧರು ಎಂದಿದ್ದ ಈಶ್ವರಪ್ಪ ಹೇಳಿಕೆಗೆ ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ಮಾತನ್ನು ಹೇಳಲು ಅವರಿಗೆ ನಾಚಿಕೆ ಆಗಲ್ಲವೇ(?) ನಾವು ಗಂಡಸರೇ ಅಲ್ಲ ಎಂದಿದ್ದಾರೆ. ಅವರ ಬಳಿ ಶಕ್ತಿ ಇದ್ದಾರೆ, ನಮ್ಮ ಬಳಿ ಬಂದು ನಾವು ಗಂಡಸರೇ ಅಲ್ಲವೋ ಎಂದು ಪರೀಕ್ಷೆ ಮಾಡಿಕೊಳ್ಳಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಇನ್ನು ಈ ಸರ್ಕಾರ ಮೇ 23ಕ್ಕೆ ಬೀಳುವುದಿಲ್ಲ. ದೇಶದ ಪ್ರಧಾನಿ ಮೈತ್ರಿ ಸರ್ಕಾರ ಬಿಳುತ್ತೆ ಎನ್ನುತ್ತಾರೆ. ಅವರು ಹೀಗೆ ಹೇಳುವುದು ಎಷ್ಟು ಸರಿ(?) ನಾವು ಯಾರು ಖರೀದಿಗೆ ಇಲ್ಲ, ಈ ರೀತಿಯ ಕೀಳು ಮಟ್ಟದ  ರಾಜಕಾರಣ ನೋಡಿ ಬೇಸರವಾಗುತ್ತೆ, ಅವರು ತಮ್ಮ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪಗೆ ಎಚ್ಚರಿಕೆ ನೀಡಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *