ಹೇಗಿದೆ ಗೊತ್ತಾ ಶಿವಣ್ಣನ ಪೊಲೀಸ್ ಬೇಬಿ ಸ್ಟೆಪ್ಸ್..?

ನಾಟ್ಯಸಾರ್ವಭೌಮ ಡಾ. ಶಿವರಾಜ್​ಕುಮಾರ್​ ಅಭಿಮಾನಿಗಳು ಕಾಯ್ತಿದ್ದ ಬಿಂದಾಸ್​ ಡ್ಯಾನ್ಸಿಂಗ್ ನಂಬರ್ ರಿಲೀಸ್ ಆಗಿದೆ. ರುಸ್ತುಂ ಸಿನಿಮಾದ ಈ ರಂಗೀನ್​ ನಂಬರ್​ಗೆ ಶಿವಣ್ಣ, ಶ್ರದ್ಧಾ ಶ್ರೀನಾಥ್​​ ಬೊಂಬಾಟ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದಾರೆ.

ತಮಿಳಿನ ಮಾರಿ-2 ಚಿತ್ರದ ರೌಡಿ ಬೇಬಿ ಸಾಂಗ್​ನ ನೆನಪಿರೋ ಈ ಬಿಂದಾಸ್​ ಸಾಂಗ್​ಗೆ ಅನೂಪ್ ಸಿಳೀನ್ ಟ್ಯೂನ್ ಹಾಕಿದರೆ, ರಘು ದೀಕ್ಷಿತ್ ಮತ್ತು ಎ. ಪಿ ಅರ್ಜುನ್ ಲಿರಿಕ್ಸ್ ಬರೆದಿದ್ದಾರೆ. ಗಾಯಕರಾಗಿ ರಘು ದೀಕ್ಷಿತ್​​ ಮತ್ತು ಅಪೂರ್ವ ಶ್ರೀಧರ್​ ಹಾಡಿಗೆ ಜೀವ ತುಂಬಿದ್ದಾರೆ. ಕಲರ್​ಫುಲ್ ಸೆಟ್​ನಲ್ಲಿ ಬಿಂದಾಸ್​ ಕಾಸ್ಟ್ಯೂಮ್ಸ್​​​ನಲ್ಲಿ ಶಿವಣ್ಣ, ಶ್ರದ್ಧಾ ಕುಣಿದು ಕುಪ್ಪಳಿಸಿದ್ದಾರೆ.

ಇಮ್ರಾನ್  ಮಾಸ್ಟರ್​ ಒಂದಷ್ಟು ಡ್ಯಾನ್ಸರ್ಸ್​ ಬಳಸಿಕೊಂಡು ಪೊಲೀಸ್ ಬೇಬಿ ಸಾಂಗ್ ಕೊರಿಯೋಗ್ರಫಿ ಮಾಡಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಸೆಟ್​ ಹಾಕಿ ಒಂದು ವಾರದ ಕಾಲ ಈ ಹಾಡನ್ನು ಶೂಟ್ ಮಾಡಲಾಗಿತ್ತು.. ಈಗಾಗಲೇ ರುಸ್ತುಂ ಸಿನಿಮಾ ಟ್ರೈಲರ್ ಸಿನಿಮಾ ಬಗ್ಗೆ ಕುತೂಹಲ ಕೆರಳಿಸಿದ್ದು, ಸದ್ಯ ಈ ಡ್ಯಾನ್ಸಿಂಗ್ ನಂಬರ್ ಮತ್ತಷ್ಟು ಪವರ್ ತುಂಬಿದೆ.

ಟಗರು ಖ್ಯಾತಿಯ ಛಾಯಾಗ್ರಾಹಕ ಮಹೇನ್​ ಸಿಂಹ ಅಂಡ್ ಟೀಂ ಪೊಲೀಸ್​ ಬೇಬಿ ಸಾಂಗ್​ನ ಅಷ್ಟೆ ಕಲರ್​ಫುಲ್ಲಾಗಿ ಸೆರೆಹಿಡಿದಿದೆ. ಸ್ಟಂಟ್ ಮಾಸ್ಟರ್ ರವಿವರ್ಮಾ ನಿರ್ದೇಶನದ ಚೊಚ್ಚಲ ಸಿನಿಮಾ ರುಸ್ತುಂ. ಜಯಣ್ಣ ಮತ್ತು ಭೊಗೇಂದ್ರ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಸದ್ಯ ರುಸ್ತುಂ ಆಲ್ಬಮ್​​ನ ಫಸ್ಟ್ ರಿಲೀಸ್ ಆಗಿದೆ. ಸದ್ಯ ಸಾಂಗ್ ರಿಲೀಸ್ ಮಾಡಿರೋ ಚಿತ್ರತಂಡ ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರೋ ಲೆಕ್ಕಚಾಚಾರದಲ್ಲಿದೆ.

Recommended For You

About the Author: Dayakar

Leave a Reply

Your email address will not be published. Required fields are marked *