ಕಾಲಿಂದ ರಕ್ತ ಸೋರುತ್ತಿದ್ದರೂ ಪಂದ್ಯವಾಡಿ ಕ್ರೀಡಾ ಸ್ಪೂರ್ತಿ ಮೆರೆದ ಶೇನ್​ ವ್ಯಾಟ್ಸನ್​

ಹೈದಾರಬಾದ್: ಐಪಿಎಲ್ ಸೀಸನ್ 12ರ ಫೈನಲ್​ ಪಂದ್ಯದ ಬಹಳ ಕುತೂಹಲದಿಂದ ಕೂಡಿತ್ತು. ಒಂದೆಡೆ ವಿಕೆಟ್​ಗಳು ಬೀಳುತ್ತಿದ್ರೆ, ಮತ್ತೊಂದೆಡೆ ರನ್​ ಕದಿಯುವ ಅತುರದಲ್ಲಿ ರನೌಟ್​​ ತಪ್ಪಿಸಲು ಡೈವ್​ ಮಾಡಿ ಮೊಣಕಾಲಿನಿಂದ ರಕ್ತ ಸುರಿಯುತಿತ್ತು, ಹರಿದ ರಕ್ತದಿಂದಾ ಹಳದಿ ಬಣ್ಣದ ಜರ್ಸಿ ಪ್ಯಾಂಟ್​ ಕೆಂಪಾಗಿತ್ತು ಆದರೂ ಛಲ ಬಿಡದ ಹೋರಾಟ ಮಾಡಿದ ಕತೆ. ಇದು ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಆಟಗಾರ ಶೇನ್ ವ್ಯಾಟ್ಸನ್​ ಪೈನಲ್​ ಪಂದ್ಯದಲ್ಲಿ ನಡೆದ ರಿಯಲ್​ ಇನ್​​ಸೈಡ್​ ಸ್ಟೋರಿ.

ಭಾನುವಾರ ಹೈದಾರಬಾದ್​ ಕ್ರಿಂಡಾಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಸರ್ಸ್ ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳ ನಡುವಿನ ಫೈನಲ್​ ಟಿ-20 ಪಂದ್ಯದಲ್ಲಿ ಈ ಘಟನೆ ನಡೆದಿದೆ.

ಭರ್ಜರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಶೇನ್ ವ್ಯಾಟ್ಸನ್​ ರನ್​ ಕದಿಯುವ ಅತುರದಲ್ಲಿ ಡೈವ್​ ಮಾಡಿದರು ಪರಿಣಾಮ ಮೊಣ ಕಾಲು ಗಾಯಗೊಂಡಿತ್ತು. ಆದರೂ ಪಂದ್ಯಕ್ಕೆ ಯಾವುದೇ ಅಚಣೆ ಆಗಬಾರದು ಎಂಬ ಕಾರಣಕ್ಕೆ ಪ್ರಥಮ ಚಿಕ್ಸಿತೆಯನ್ನು ಪಡೆಯದೇ ತಮ್ಮ ಹೋರಾಟ ಮುಂದುವರಿಸಿದ್ದರು.

ಈ ಪಂದ್ಯದಲ್ಲಿ 50 ಎಸೆತವನ್ನು ಎದುರಿಸಿ 80ರನ್​ಗಳನ್ನು ತಂಡಕ್ಕೆ ಕೊಡುಗೆಯಾಗಿ ನೀಡಿ ಕೊನೆಯ ಓವರ್​ನಲ್ಲಿ ಔಟ್​ಆಗಿ ನಿರ್ಗಮಿಸಿದರು ಆದರೂ ಸಹ ಚೆನ್ನೈ ಗೆಲುವಿನ ದಡ ಸೇರಲು ಸಾಧ್ಯವಾಗದೇ ಮುಂಬೈ ತಂಡಕ್ಕೆ ಶರಣಾಗಿತ್ತು.

ಪಂದ್ಯ ಮುಗಿದ ಬಳಿಕ ವ್ಯಾಟ್ಸನ್​ ಮೊಣ ಕಾಲಿಗೆ ಆರು ಸ್ಟೀಚ್(ಹೊಲಿಗೆ) ಹಾಕಲಾಗಿದೆ. ಈ ವಿಷಯವನ್ನು ಇನ್ಸ್ಟಾ ಗ್ರಾಮ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ಜಗಜ್ಜಾಹೀರು ಮಾಡಿದ ಹರ್ಭಜನ್​ ಸಿಂಗ್​ ಸಹದ್ಯೋಗಿ ಆಟದ ವೈಖರಿಯನ್ನು ಕೊಂಡಾಡಿದ್ದಾರೆ.

ಈ ಪೋಸ್ಟ್ ವೈರಲ್​ ಆಗುತ್ತಿದ್ದಂತೆ ವ್ಯಾಟ್ಸನ್​ ಕ್ರೀಡಾ ಸ್ಪೂರ್ತಿಯನ್ನು ಕ್ರಿಕೆಟ್​ ಪ್ರೇಮಿಗಳು ಕೊಂಡಾಡಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *