ಈ ಬಾರಿ ಐಪಿಎಲ್​​ನಲ್ಲಿ ಭರ್ಜರಿಯಾಗಿ ಧೂಳ್​​ ಎಬ್ಬಿಸಿದ ಕಲಿಗಳು..!

ನವದೆಹಲಿ: ಐಪಿಎಲ್, ಎಂದಾಕ್ಷಣ ನೆನಪಿಗೆ ಬರೋದು ಹೊಡಿಬಡಿ ಆಟ, ಸಿಕ್ಸರ್​, ಬೌಂಡರಿ ಬಾರಿಸೋ ಆಟಗಾರರು. ತಂಡ ಸೋಲುವ ಹಂತದಲ್ಲಿ ಎದುರಾಳಿ ವಿಕೆಟ್​ ಕಿತ್ತು ನೆರವಿಗೆ ಬರೋ ಬೌಲರ್ಸ್​ಗಳು. ಸ್ಲಾಗ್​ ಓವರ್ಸ್​ನಲ್ಲಿ ತಂಡದ ಮೊತ್ತವನ್ನ ಹಿಗ್ಗಿಸುವ ಪವರ್​ ಹಿಟ್ಟರ್ಸ್, ಇವೆರೆಲ್ಲಾ ಆಯಾ ತಂಡಗಳಿಗೆ ಆಪಾದ್ಬಾಂದವರು.
ಆದರೆ, ಕ್ರಿಕೆಟ್​ ಅಭಿಮಾನಿಗಳ ಪಾಲಿಗೆ ಇವರೇ ಸೂಪರ್​ ಸ್ಟಾರ್ಸ್​, ಸೂಪರ್​ ಮ್ಯಾನ್ಸ್​. ಅಂಧಾಹಾಗೇ ಈ ಬಾರಿಯ ಐಪಿಎಲ್​ನಲ್ಲಿ ಸೂಪರ್​ ಸ್ಟಾರ್ಸ್​ ಯಾರು ಅನ್ನೋದು ತೋರಿಸ್ತೀವಿ ನೋಡಿ.
ಸನ್ ರೈಸರ್ಸ್​ ಪಾಲಿಗೆ ಬಾಹುಬಲಿ ಆದ ವಾರ್ನರ್..!
ಸನ್​ ರೈಸರ್ಸ್​ ಹೈದ್ರಾಬಾದ್​ ಪರ ಕಣಕ್ಕಿಳಿಯುತ್ತಿದ್ದ ಡ್ಯಾಶಿಂಗ್ ಓಪನರ್​​ ಡೇವಿಡ್​ ವಾರ್ನರ್​ ತಂಡದ ಪಾಲಿಗೆ ಬಾಹುಬಲಿ. 1 ವರ್ಷದ ಬಳಿಕ ಬ್ಯಾಟ್​ ಇಡಿದು ಮೈದಾನಕ್ಕಿಳಿದ ವಾರ್ನರ್​ ತಮ್ಮ ಬ್ಯಾಟಿಂಗ್​ ಖದರ್​​ ಕಳೆದುಕೊಳ್ಳಲಿಲ್ಲ ಅನ್ನೋದನ್ನ ಈ ಬಾರಿಯ ಐಪಿಎಲ್​ನಲ್ಲಿ ತೋರಿಸಿಕೊಟ್ಟಿದ್ದಾರೆ.
ಎದುರಾಳಿ ಯಾರೇ ಇದ್ದರೂ ಹುಲಿಯಂತೆ ಮೈದಾನದಲ್ಲಿ ಹೋರಾಟ ನಡೆಸೋದ್ರಲ್ಲಿ ವಾರ್ನರ್ ಎಂದು ಮುಂದು. ಈ  ಬಾರಿ  ಜಾನಿ ಬೈರ್​  ಸ್ಟೋ  ಜೊತೆಗೂಡಿ ದಾಖಲೆ  ಬರೆದಿರುವ ವಾರ್ನರ್  12 ಪಂದ್ಯಳಿಂದ ​ 692 ರನ್​ ರನ್  ಕಲೆ ಹಾಕಿ ನಂಬರ್​ 01 ಸ್ಥಾನದಲ್ಲಿದ್ದಾರೆ. ತಂಡದ ಬ್ಯಾಟಿಂಗ್​ ಬೆನ್ನೆಲುಬಾಗಿ ಡೇವಿಡ್​ ವಾರ್ನರ್​ ತಂಡವನ್ನ ಗೆಲ್ಲಿಸಿಕೊಟ್ಟಿದ್ದಾರೆ. ಸನ್​ ರೈಸರ್ಸ್​ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿದ್ರಲ್ಲಿ ಡೇವಿಡ್​ ವಾರ್ನರ್​  ಪಾತ್ರಬಹಳ ದೊಡ್ಡದು.
ಮಸಲ್​ ಪವರ್​ನಿಂದಲೇ ಅಬ್ಬರಿಸಿದ ಆ್ಯಂಡ್ರೊ ರಸ್ಸೆಲ್ 
ದಿನೇಶ್  ಕಾರ್ತಿಕ್  ನೇತೃತ್ವದ  ಕೋಲ್ಕತ್ತಾ ನೈಟ್​ ರೈಡರ್ಸ್​ ಪಾಲಿಗೆ ಜಮೈಕನ್​  ಕಿಂಗ್​ ಆಂಡ್ರೋ ರಸ್ಸೆಲ್ ಕಿಂಗ್​​ ಆಗಿದ್ದಾರೆ.  ಯೆಸ್​ ಎದುರಾಳಿ ಯಾರೇ ಇರಲಿ, ಬೌಲರ್​ ಯಾರೇ ಇರಲಿ, ಮೈದಾನ ಯಾವುದೇ ಇರಲಿ ಈ  ಜಮೈಕನ್  ಕಿಂಗ್  ಸಿಕ್ಸರ್​ ಗಡಿ  ದಾಟಿಸೋದ್ರಲ್ಲಿ  ​​ ಎತ್ತಿದ ಕೈ.. ಈ ಜಮೈಕನ್  ಕಿಂಗ್  ಒಮ್ಮೆ   ಕ್ರೀಸ್​ಗೆ ನೆಲ ಕಚ್ಚಿ ನಿಂತ್ರೆ  ಮುಗೀತು ಎದುರಾಳಿಗಳು  ಮೂಕ  ಪ್ರೇಕ್ಷಕರಾಗುತ್ತಾರೆ.
ಟೂರ್ನಿಯಲ್ಲಿ 510 ರನ್​ಗಳನ್ನು ಸಿಡಿಸಿರೋ ರಸೆಲ್ ಅರ್ಧಶತಕ ಸಿಕ್ಸರ್​ ಸಿಡಿಸಿದ್ದಾರೆ. ಇನ್ನೂ  ​ಬೆಸ್ಟ್​​ ಸ್ಟ್ರೈಕ್​ರೇಟ್ ಹೊಂದಿದ್ದಾರೆ.  ಸ್ಲಾಗ್​ ಓವರ್​​ಗಳಲ್ಲಿ ಎದುರಾಳಿಗಳಿ ಬೌಲರ್​ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದಾರೆ. ಈ ಮೂಲಕ ಕೋಲ್ಕತ್ತಾ ತಂಡದ ಮ್ಯಾಚ್​ ವಿನ್ನರ್​​ ಎನಿಸಿದ್ದಾರೆ.
ಮುಂಬೈ ಮ್ಯಾಚ್​ ಫಿನಿಷರ್ ಹಾರ್ದಿಕ್ ಪಾಂಡ್ಯಾ
ಈ ಬಾರಿ ಮುಂಬೈ ಪಾಲಿಗೆ ಅಲ್ರೌಂಡರ್​​​​​​​ ಹಾರ್ದಿಕ್​ ಪಾಂಡ್ಯಾ ಹಿರೋ ಆಗಿದ್ದಾರೆ. ಅಲ್ದೇ ತಂಡ ರನ್​​​​ ಬರ ಎದುರಿಸುವಾಗ ಬ್ಯಾಟ್​ನಿಂದ ರನ್ ಮಳೆ ಹರಿಸೋ ಪಾಂಡ್ಯಾ, ನಂತರ ಎದುರಾಳಿ ವಿಕೆಟ್​ ಉರುಳಿಸಿ   ತಂಡದ ನೆರವಿಗೆ ಬಂದಿದ್ದಾರೆ. ಆಂಡ್ರೋ ರಸೆಲ್​​​​​​​​​​​​​​​​​​​​ಗಿಂತ ನಾನು ಅಪಾಯಕಾರಿ ಅನ್ನೋದನ್ನ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಪಾಂಡ್ಯಾ ತೋರಿಸಿಕೊಟ್ಟಿದ್ದಾರೆ.
ಈ ಬಾರಿಯ ಐಪಿಎಲ್​​​​​ನಲ್ಲಿ ಫಾಸ್ಟೆಸ್ಟ್​ ಆಫ್​ ಸೆಂಚುರಿ ಬಾರಿಸಿದ ಕೀರ್ತಿ ಪಾಂಡ್ಯಾಗೆ ಸೇರುತ್ತೆ. ಈ ಬಾರಿ  ಐಪಿಎಲ್​ನಲ್ಲಿ  ಹೆಲಿಕಾಪ್ಟರ್ ಶಾಟ್​ಗಳನ್ನ  ಹೊಡೆದು  ತಮ್ಮ  ಟ್ಯಾಲೆಂಟ್  ತೋರಿಸಿದ್ದಾರೆ.  ಈ  ಬರೋಡ ಸ್ಟಾರ್  15 ಪಂದ್ಯಗಳಿಂದ 393 ರನ್ ಕಲೆ ಹಾಕಿ  14 ವಿಕೆಟ್  ಪಡೆದಿದ್ದಾರೆ.
ಕಗಿಸೋ ರಬಡಾ-ಇಮ್ರಾನ್​​ ತಾಹೀರ್ ಕಮಾಲ್
ಟಿ20 ಲೀಗ್​​ಗಳಲ್ಲಿ ಬೌಲರ್​​ಗಳು ಗಮನ ಸೆಳೆಯೋದು ಅಷ್ಟಕ್ಕೆ ಅಷ್ಟೇ​. ಆದ್ರೆ, ಬ್ಯಾಟ್ಸ್​ಮನ್​ಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಬೌಲರ್​ಗಳು ಕಗಿಸೋ ರಬಡಾ, ಇಮ್ರಾನ್ ತಾಹೀರ್ ಆಗಿದ್ದಾರೆ. 12 ಪಂದ್ಯಗಳಿಂದ 25 ವಿಕೆಟ್ ಉರುಳಿಸಿದ ಕಗಿಸೋ ರಬಡಾ ನಿಜವಾಗಿಯೂ ಬ್ಯಾಟ್ಸ್​ಮನ್​ಗಳಿಗೆ ಕಬ್ಬಿಣದ ಕಡಲೇ ಆಗಿದ್ದರು. ದುರಾದೃಷ್ಟ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರನಡೆಯಬೇಕಾಯ್ತು. ಡೆಲ್ಲಿ ಪ್ಲೇ ಆಫ್​ ಪ್ರವೇಶಿಸದ ಹಿಂದೆ ರಬಡಾ ಶ್ರಮ ಹೆಚ್ಚಿದೆ
ಚೆನ್ನೈ ತಂಡದ  ಸಕ್ಸಸ್​ನಲ್ಲಿ  ಇಮ್ರಾನ್ ತಾಹೀರ್ ಇಮ್ರಾನ್ ಪ್ರಮುಖ  ಪಾತ್ರವಹಿಸಿದ್ದಾರೆ.  15 ಪಂದ್ಯಗಳಿಂದ 23 ವಿಕೆಟ್​ ಪಡೆದಿದ್ದಾರೆ. ಇವರಿಬ್ಬರ ಮಧ್ಯೆಯೂ 20 ವಿಕೆಟ್​​ ಪಡೆಯೋ ಮೂಲಕ ಕನ್ನಡಿಗ ಶ್ರೇಯಸ್​ ಗೋಪಾಲ್ ಗಮನ ಸೆಳೆದಿದ್ದಾರೆ.
ಒಟ್ನಲ್ಲಿ ಈ ಬಾರಿಯ ಟ್ರಂಪ್​​ ಕಾರ್ಡ್​ಗಳಾಗಿ ಗುರುತಿಸಿಕೊಂಡ ಇವ್ರ ಆಟ ಹೀಗೆ ಮುಂದುವರಿಯಲಿ ಎಂಬುವುದೇ ಕ್ರಿಕೆಟ್​ ಪ್ರೇಮಿಗಳ ಅಭಿಲಾಷೆ

 

Recommended For You

About the Author: TV5 Kannada

Leave a Reply

Your email address will not be published. Required fields are marked *