ಸಮುದ್ರದ ನೀರಲ್ಲಿ ಬಿದ್ದ ಮೊಬೈಲ್​​ಅನ್ನು ತಿಮಿಂಗಲ ತಂದುಕೊಟ್ಟಿದೆ- ದೃಶ್ಯ ವೈರಲ್​​

ನಾರ್ವೆ: ವಿಶಾಲವಾದ ಬೃಹತ್​ ಸಮುದ್ರದ ನೀರಿನೊಳಗೆ ಬೋಟ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಆಕಸ್ಮಿಕವಾಗಿ ಯುವತಿಯ ಮೊಬೈಲ್ ಸಮುದ್ರದ ನೀರಿನೊಳಗೆ ಬೀಳುತ್ತದೆ. ಇನ್ನೇನೋ ಮೊಬೈಲ್ ಹೊಯ್ತಲ್ಲ ಎಂದು ಬೇಸರವಾಗುತ್ತಿರುವಾಗಲೇ ಒಂದು ಪವಾಡ ನಡೆದಿದೆ.

ಯೆಸ್​​, ಸಮುದ್ರದ ನೀರಿನೊಳಗೆ ಬಿದ್ದ ಪೋನ್​​​​ ಅನ್ನು ಬಿಳಿಯ ತಿಮಿಂಗಿಲವೊಂದು ತನ್ನ ಬಾಯಲ್ಲಿ ಇರಿಸಿಕೊಂಡು ಮೇಲೆ ಬಂದಿದೆ. ಈ ದೃಶ್ಯವನ್ನು ನೋಡಿದ ಈ ಬೋಟ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಹಾಗೂ ಸಹಚರರು ಒಂದು ಕ್ಷಣ ಆಶ್ಚರ್ಯಕ್ಕೊಳಗಾದರು. ಬಳಿಕ ತಿಮಿಂಗಿಲ ಬಾಯಿಯಿಂದ ಮೊಬೈಲ್ ಅನ್ನು ತೆಗೆದುಕೊಂಡಿದ್ದಾರೆ.

ಬೋಟ್ ನಲ್ಲಿದ್ದವರು ಮೊಬೈಲ್ ಅನ್ನು ತೆಗೆದುಕೊಳ್ಳುವ ವರೆಗೂ ಈ ತಿಮಿಂಗಲವು ಹಾಗೆಯೇ ನಿಂತಿರುತ್ತದೆ. ನಾರ್ವೆ ದೇಶದ ಹ್ಯಾಮರ್ ಫೆಸ್ಟ್ ಬಂದರು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಇದೀಗ ಸಖತ್​ ವೈರಲ್ ಆಗಿದೆ.

ಅಲ್ಲದೇ ಇನ್​​​ಸ್ಟ್​​ಗ್ರಾಮ್​ನಲ್ಲಿ ನೋಡಿದೆವರೆಲ್ಲರು ಬಹಳ ಕುತೂಹಲದಿಂದ ಕಣಾರಳಿಸಿ ನೋಡಿದಲ್ಲದೇ ಈ ದೃಶ್ಯಕ್ಕೆ ಮೆಚ್ಚುಗೆ ಮತ್ತು ಶೇರ್​ ಮಾಡುವವರ ಸಂಖ್ಯೆ ಹೆಚ್ಚಾಗಿದೆ.​​

Recommended For You

About the Author: TV5 Kannada

Leave a Reply

Your email address will not be published. Required fields are marked *