ಕರ್ನಾಟಕಕ್ಕೂ ‘ಫನಿ’ ಎಫೆಕ್ಟ್‌..!! ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ

ದಕ್ಷಿಣ ಭಾರತದ ಕರಾವಳಿಗೆ ಮತ್ತೆ ಚಂಡಮಾರುತದ ಭೀತಿ ಎದುರಾಗಿದೆ. ವಾಯಭಾರ ಕುಸಿತದಿಂದ ಹಿಂದೂ ಮಹಾಸಾಗರದ ಪೂರ್ವ ಭಾಗ ಹಾಗೂ ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಹುಟ್ಟಿಕೊಂಡಿರುವ ಫಣಿ ಚಂಡಮಾರುತ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ನಿನ್ನೆ  ಇಂದು ರಾತ್ರಿಯೇ ಚಂಡಮಾರುತ ಬಿರುಗಾಳಿಯಾಗಿ ತೀವ್ರಗೊಳ್ಳಲಿದೆ.

ಮುಂದಿನ 24 ಗಂಟೆಗಳಲ್ಲಿ ತೀವ್ರಗೊಳ್ಳುವ ಫನಿ, ನಾಳೆ ಸಂಜೆ ವೇಳೆಗೆ ತಮಿಳುನಾಡು ಮತ್ತು ಆಂಧ್ರದ ಕರಾವಳಿಗೆ ಅಪ್ಪಳಿಸಲಿದೆ.  ಈಗಾಗಲೇ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಲಕ್ಷದ್ವೀಪದಲ್ಲಿ ಚಂಡಮಾರುತದ ಎಫೆಕ್ಟ್‌ ಕಾಣಿಸಿಕೊಂಡಿದೆ.

ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆ ಅನ್ವಯ ನಾಳೆ ಕೇರಳದ 4 ಜಿಲ್ಲೆಗಳಾದ ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ವಯನಾಡು ಜಿಲ್ಲೆಗಳಲ್ಲಿ ಚಂಡಮಾರುತ ಪ್ರಭಾವ ಬೀರಲಿದೆ.  ಹಾಗೆಯೇ, ತಮಿಳುನಾಡು ಮತ್ತು ಆಂಧ್ರದ ಹಲವೆಡೆ ಮಂಗಳವಾರ ಮತ್ತು ಬುಧವಾರ ಸಾಧಾರಣ ಮತ್ತು ಭಾರೀ ಮಳೆಯಾಗಲಿದೆ.

ಮೀನುಗಾರರಿಗೆ ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ, ಈಗಗಾಲೇ ಸಮುದ್ರದ ಇಳಿದವರು ತ್ವರಿತವಾಗಿ ಹಿಂದಿರುಗುವಂತೆ ಹಾಗೂ ಯಾರೂ ಮೀನುಗಾರಿಕೆಗೆ ತೆರಳದಂತೆ ಸೂಚಿಸಿದೆ.

ಫನಿ ಪ್ರಭಾವ ರಾಜ್ಯಕ್ಕೂ ತಟ್ಟಲಿದ್ದು, ಇಂದಿನಿಂದ ಮೂರು ದಿನಗಳ ಕಾಲ ಹಳೆ ಮೈಸೂರು ಭಾಗದಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಕರ್ನಾಟಕದ ಕರಾವಳಿಯಲ್ಲಿ ಗುಡುಗು, ಮಿಂಚು ಸಹಿತ ಬಿರುಗಾಳಿಯೊಂದಿಗೆ ಭಾರೀ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

Recommended For You

About the Author: Dayakar

Leave a Reply

Your email address will not be published. Required fields are marked *