ಶ್ರೀಲಂಕಾದ ಮೇಲೆ ಸರಣಿ ಬಾಂಬ್ ಸ್ಪೋಟ – ಹೊಣೆ ಹೊತ್ತ ISIS ಉಗ್ರ ಸಂಘಟನೆ

ಶ್ರೀಲಂಕಾ, ಕೊಲೊಂಬೊ: ಏಪ್ರಿಲ್ 21(ಭಾನುವಾರ)ದಂದು ನಡೆದ ಚರ್ಚ್‌ ಮತ್ತು ಹೋಟೆಲ್‌ಗಳ ಮೇಲಿನ ದಾಳಿಯ ಹಿಂದೆ ತಮ್ಮ ಕೈವಾಡವಿದೆ ಎಂಬುದನ್ನು ಉಗ್ರ ಸಂಘಟನೆ ಐಎಸ್‌ಐಎಸ್‌ (ISIS) ಬಹಿರಂಗಪಡಿಸಿದೆ.

ಐಎಸ್‌ಐಎಸ್‌ ಉಗ್ರ ಸಂಘಟನೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ಸುದ್ದಿ ಪ್ರಸಾರ ಮಾಡುವ ‘ಅಮಾಕ್‌ ನ್ಯೂಸ್‌ ಏಜನ್ಸಿ’(Amaq News Agency) ಈ ಕುರಿತು ವರದಿ ಪ್ರಸಾರ ಮಾಡಿದೆ. ಆದರೆ, ದಾಳಿಗೆ ಸಂಬಂಧಿಸಿದಂತೆ ಯಾವುದೇ ವಿವರಣೆ ಆಗಲಿ, ಸಾಕ್ಷ್ಯಾಧಾರಗಳನ್ನ ಆಗಲಿ ನೀಡಿಲ್ಲ. ಅಮಾಕ್‌ನ ವರದಿ ಉಲ್ಲೇಖಿಸಿ ಅಂತರರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಣೆ ಮಾಡಿವೆ.

ಶ್ರೀಲಂಕಾ ರಾಜಧಾನಿ ಕೊಲಂಬೊದ ಚರ್ಚ್​​, ಹೋಟೆಲ್​​ಗಳ ಮೇಲೆ ಏಪ್ರಿಲ್ 21, 2019ರಂದು ನಡೆದ ಆತ್ಮಾಹುತಿ ಸರಣಿ ಬಾಂಬ್ ಸ್ಪೋಟದ ದುರಂತದಲ್ಲಿ 310ಕ್ಕೂ ಹೆ್ಚ್ಚು ಮಂದಿ ಹತರಾಗಿ, 500ಕ್ಕೂ ಮಂದಿ ಗಾಯಗೊಂಡಿದ್ದರು.

Recommended For You

About the Author: TV5 Kannada

Leave a Reply

Your email address will not be published. Required fields are marked *