ಪ್ರೇಮ ವಿವಾಹವಾಗಿದ್ದ ದಂಪತಿಗೆ ಪ್ರೀತಿಯೇ ಭಯಾನಕವಾಗಿ ಅಂತ್ಯ ಹಾಡಿತ್ತು..!

ಬೆಂಗಳೂರು: ಪ್ರೀತಿಸಿ ವಿವಾಹವಾಗಿದ್ದ ದಂಪತಿಗೆ ಪ್ರೀತಿಯೇ ಭಯಾನಕವಾಗಿ ಅಂತ್ಯ ಹಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅತುಲ್ ಉಪಾಧ್ಯಾಯ ಮತ್ತು ಮಮತಾ ದಂಪತಿ ಪ್ರೀತಿಸಿ ವಿವಾಹವಾಗಿದ್ದು, ಪತ್ನಿ ಮಮತಾ ಕ್ಯಾನ್ಸರ್‌ಗೆ ತುತ್ತಾಗಿದ್ದಳು. ಇದರಿಂದ ಬೇಸರಗೊಂಡಿದ್ದ ಅತುಲ್ ಮಮತಾಳನ್ನು ಬದುಕಿಸಲು ಹರಸಾಹಸಪಟ್ಟಿದ್ದ. ಆದರೆ ಕ್ಯಾನ್ಸರ್ ಅಂತಿಮ ಹಂತ ತಲುಪಿದ್ದರಿಂದ ಮಮತಾಳನ್ನು ಬದುಕಿಸುವುದು ಕಷ್ಟವಾಗಿತ್ತು.

ಈ ಕಾರಣಕ್ಕೆ ಏಪ್ರಿಲ್ 2ರಂದು ಪತ್ನಿ ಜೊತೆ ಜಗಳವಾಗಿದ್ದು, ಜಗಳ ತಾರಕಕ್ಕೇರಿ ಅತುಲ್ ಡಂಬಲ್‌ನಿಂದ ಪತ್ನಿಯ ಕೊಲೆ ಮಾಡಿದ್ದಾನೆ. ಪತ್ನಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಅತುಲ್ ತಮ್ಮ ಮನೆಯ ನಾಯಿಯನ್ನು ಕರೆದುಕೊಂಡು ಟೆರೆಸ್‌ಗೆ ಹೋಗಿ, ನಾಯಿಯನ್ನು ಕೆಳಗೆ ಬಿಸಾಕಿ, ತಾನೂ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

Recommended For You

About the Author: TV5 Kannada

Leave a Reply

Your email address will not be published. Required fields are marked *