ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ : ಸಿದ್ದರಾಮಯ್ಯ

ದೇಶದಲ್ಲಿ ಸುಮಾರು 150 ಸೀಟುಗಳು ಕಾಂಗ್ರೆಸ್ ಗೆ ಬರುತ್ತವೆ. ಮೈತ್ರಿಕೂಟ ಸೇರಿ 300 ಸ್ಥಾನಗಳು ಬರುವ ನಿರೀಕ್ಷೆಯಿದೆ. ರಾಹುಲ್ ಗಾಂಧಿಯೇ ನಮ್ಮ ಮುಂದಿನ ಪ್ರಧಾನಿ, ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸೀಟು ಮೈತ್ರಿಗೆ ಬರುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೇ ನೀಡಿದರು.

ಚೌಕೀದಾರ್ ಮೋದಿಯವರಿಗೆ ಇದೆಲ್ಲವೂ ಗೊತ್ತಿಲ್ಲವೇ

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ಆಪರೇಶನ್ ಕಮಲ ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು, ಹಿಂದೆ ರಾಜೀನಾಮೆ ಕೊಡುತ್ತಿದ್ದರು, ಬೇರೆ ಪಕ್ಷಗಳಿಗೂ ಹೋಗಿತ್ತಿದ್ದರು ಆದರೆ ಸಾಮೂಹಿಕ ರಾಜೀನಾಮೆ ಕೊಡುವುದು ಅಧಿಕಾರ, ಹಣದ ಆಸೆಗೆ ಹೋಗುವುದು ಅಪರಾಧ,  ಚೌಕೀದಾರ್ ಮೋದಿಯವರಿಗೆ ಇದೆಲ್ಲವೂ ಗೊತ್ತಿಲ್ಲವೇ  ಇದರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ  ಧ್ವನಿ ಎತ್ತಿದ್ದಾರೆಯೇ ಹೇಳಿ ಅವರೂ ಇದರ ಪರವಾಗಿಯೇ ಇದ್ದಾರೆ ಎಂದು ಕಿಡಿಕಾರಿದರು.

ತಪ್ಪು ಯಾರೇ ಮಾಡಿದರು ಅದು ತಪ್ಪೇ

ಅಮಿತ್ ಶಾ ಕೂಡ ಆಪರೇಷನ್ ಕಮಲದ ರೂವಾರಿಯೇ, ನಮ್ಮ ಶಾಸಕರನ್ನು ಶಾ, ಫಡ್ನವಿಸ್ ಮುಂದೆ ನಿಲ್ಲಿಸ್ತಾರೆ.  ಈ ಆಪರೇಷನ್ ಕಮಲ ಪ್ರಜಾಪ್ರಭುತ್ವದ ವಿರುದ್ಧವಾದುದು. ಅದು ಯಾರೇ ಮಾಡಿದರು ಅದು  ತಪ್ಪು, ಇಂತವರಿಗೆ ಐದು ವರ್ಷ ಚುನಾವಣೆಗೆ ಅವಕಾಶ ನೀಡಬಾರದು ಹಾಗಾದಾಗ ಮಾತ್ರ ಇದಕ್ಕೆ ಕಡಿವಾಣ ಬೀಳಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸ್ಟೇ ಇರೋದ್ರಿಂದ ಎಸ್ ಐಟಿ ತಂಡ ರಚನೆಯಾಗಿಲ್ಲ

ಯಡಿಯೂರಪ್ಪ  ಆಡಿಯೋ ಬಗ್ಗೆ ಯಾಕೆ ಸುಮ್ಮನಾಗಿದ್ದಿರಾ ಎಂದು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ನೀಡಿದ್ದು, ಈ ವಿಚಾರದಲ್ಲಿ ನಾವೇನು ಹಿಂದಕ್ಕೆ ಸರಿದಿಲ್ಲ ದೇವದುರ್ಗ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ ಯಡಿಯೂರಪ್ಪ ಕಲಬುರಗಿ ಹೈ. ಪೀಠದಲ್ಲಿ ಸ್ಟೇ ತಂದಿದ್ದಾರೆ ಸ್ಟೇ ಇರೋದ್ರಿಂದ ಎಸ್ ಐಟಿ ತಂಡ ರಚನೆಯಾಗಿಲ್ಲ ಶೀಘ್ರದಲ್ಲೇ ಎಸ್ ಐಟಿ ತನಿಖೆ ನಡೆಯಲಿದೆ ಎಂದು ಸಿದ್ದರಾಮಯ್ಯ ಉತ್ತರ ನೀಡಿದರು.

ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ

ನಾನು ಮೊದಲು ರಾಜ್ಯವನ್ನು ಅಭಿವೃದ್ಧಿ ಮಾಡಬೇಕು, ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಅಂತ ಹೇಳಲ್ಲ ಮುಂದೆ ಅಂತ ಸನ್ನಿವೇಶ ಬಂದರೆ ಹೋಗಲೂಬಹುದು ಆದರೆ ಮೊದಲಿಗೆ ನನ್ನದು ರಾಜ್ಯರಾಜಕಾರಣ ಮಾತ್ರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

Recommended For You

About the Author: Dayakar

Leave a Reply

Your email address will not be published. Required fields are marked *