ವಾಟಾಳ್ ಬಂಟನಿಂದ ಗೂಂಡಾಗಿರಿ ಪ್ರಕರಣ: ಗಾಯಾಳು ಸಾವು

ಬೆಂಗಳೂರು: ವಾಟಾಳ್ ನಾಗರಾಜ್ ನಾರಾಯಣಸ್ವಾಮಿ ಬೆಂಬಲಿಗನಾಗಿದ್ದ ಪ್ರವೀಣ್, ಶಂಕರ್‌ ಎಂಬಾತನಿಗೆ ಚಾಕುವಿನಿಂದ ಇರಿದಿದ್ದು, ಚಿಕಿತ್ಸೆ ಫಲಿಸದೇ ಶಂಕರ್ ಸಾವನ್ನಪ್ಪಿದ್ದಾನೆ.

ನಿನ್ನೆ ಸಂಜೆ ಬೆಂಗಳೂರಿನ ಬೈಯಪ್ಪನಹಳ್ಳಿಯ ನಾಗವಾರಪಾಳ್ಯದ ಮೋರ್ ಶಾಪ್ ಬಳಿ ಈ ಘಟನೆ ನಡೆದಿದ್ದು, ಶಂಕರ್ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿತ್ತು.

ಜೂನಿಯರ್- ಸೀನಿಯರ್ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಾರಾಯಣಸ್ವಾಮಿ ಬಲಗೈಬಂಟ ಪ್ರವೀಣ್ ಎಂಬಾತ ಶಂಕರ್‌ನನ್ನು ಇರಿದಿದ್ದ.

ನಾಗಾವರಪಾಳ್ಯದ ಬಳಿ ಶಂಕರ್ ವಾಸವಿದ್ದು, ಇತ್ತೀಚೆಗೆ ರೌಡಿಸಂ ಆ್ಯಕ್ಟಿವಿಟೀಸ್‌ನಲ್ಲೂ ಭಾಗಿಯಾಗಿದ್ದ. ನಿನ್ನೆ ಶಂಕರ್ ಮತ್ತು ಪ್ರವೀಣ್ ಭೇಟಿಯಾಗಿದ್ದು, ಈ ವೇಳೆ ಮಾತಿಗೆ ಮಾತು ಬೆಳದು ಸೀನಿಯರ್- ಜೂನಿಯರ್ ಎಂದು ಚಾಕು ಇರಿಯಲಾಗಿದೆ.

ಶಂಕರ್‌ನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಂಕರ್ ಸ್ಥಿತಿ ಗಂಭೀರವಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಶಂಕರ್ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಬಯ್ಯಪ್ಪನಹಳ್ಳಿ ಪೊಲೀಸರು, ಪ್ರವೀಣ್‌ಗಾಗಿ ತನಿಖೆ ನಡೆಸಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *