ಹಣ ಬಳಸದಿದ್ದಲ್ಲಿ ನಿಮ್ಮನ್ನ ಜೈಲಿಗೆ ಕಳುಹಿಸುತ್ತೇನೆ: ರೇವಣ್ಣ ವಾರ್ನಿಂಗ್

ಮುಂದಿನ ತಿಂಗಳ 15 ರೊಳಗೆ ಎಲ್ಲಾ ಹಣ ಬಳಸಬೇಕು, ಹಣ ಬಳಸದಿದ್ದಲ್ಲಿ ನಿಮ್ಮನ್ನ ಜೈಲಿಗೆ ಕಳುಹಿಸುತ್ತೇನೆ ಎಂದು ಲೋಕಪಯೋಗಿ ಸಚಿವ ರೇವಣ್ಣ ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದ್ದಾರೆ.

ಹಾಸನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ  ಕೆಡಿಪಿ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಸಭೆ ಆರಂಭದಲ್ಲೇ  ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ಮತ್ತು ದೇವರಾಜ ಅರಸು ಅಭಿವೃದ್ಧಿ ನಿಗಮಗಳ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಹಣವನ್ನು ಬಳಸಿಕೊಂಡು ಜನಪರ ಕಾರ್ಯಗಳನ್ನು ಮಾಡಿ, ಜನಸಾಮನ್ಯರಿಗೆ ಸಹಾಯವಾಗುವ ರೀತಿಯಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತನ್ನಿ ಇಲ್ಲದಿದ್ದಾರೆ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ರೇವಣ್ಣ ಎಚ್ಚರಿಕೆಯನ್ನು ಹಾಸನದ ಅಧಿಕಾರಿಗಳಿಗೆ ನೀಡಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *