ಜನಾರ್ಧನ ರೆಡ್ಡಿ ಮನೆ ಮುಟ್ಟುಗೋಲು: 100ಕೋಟಿ ಆಸ್ತಿ ಜಪ್ತಿ..!

ಬೆಂಗಳೂರು: ಆ್ಯಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜನಾರ್ಧನ ರೆಡ್ಡಿ ಮನೆ(ಪಾರಿಜಾತ) ಮುಟ್ಟುಗೋಲಿಗೆ ಆದೇಶ ನೀಡಲಾಗಿದೆ.

ಈ ಹಿಂದೆ ಜನಾರ್ಧನ ರೆಡ್ಡಿ 18ಕೋಟಿ ಹಣ ಪಡೆದಿದ್ದು, ರೆಡ್ಡಿ ಬಂಧನವಾದಾಗ 18 ಕೋಟಿ ಪಾವತಿಸೋದಾಗಿ ಅಫಿಡವೀಟ್ ಸಲ್ಲಿಸಿದ್ದರು. ಆದರೆ 18 ಕೋಟಿ ಪಾವತಿಸದ ಕಾರಣ, ಆ್ಯಂಬಿಡೆಂಟ್ ವಂಚನೆ ಪ್ರಕರಣ ಹಿನ್ನೆಲೆ ನೂರು ಕೋಟಿ ಜಪ್ತಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ಬೆಂಗಳೂರು ನಗರ ಸಹಾಯಕ ಆಯುಕ್ತರಿಗೆ ಸರ್ಕಾರ ಸೂಚಿಸಿದ್ದು, ಬೆಂಗಳೂರು ಉತ್ತರ ವಿಭಾಗಾಧಿಕಾರಿ ಎಲ್.ಸಿ.ನಾಗರಾಜು ನೂರು ಕೋಟಿ ಆಸ್ತಿ ಜಪ್ತಿ ಮಾಡಿಕೊಂಡಿದ್ದಾರೆ. ಈ ನೂರು ಕೋಟಿ ಆಸ್ತಿಯಲ್ಲಿ ರೆಡ್ಡಿಯವರ ಪಾರಿಜಾತ ಮನೆಯೂ ಒಂದು.

Recommended For You

About the Author: Dayakar

Leave a Reply

Your email address will not be published. Required fields are marked *