ಸ್ಯಾಮ್‌ಸಾಂಗ್‌ Galaxy M10, M20 ಮೊಬೈಲ್‌ ಬೆಲೆ ಎಷ್ಟು ಗೊತ್ತಾ.?

Tv5 ಕನ್ನಡ ಸ್ಪೆಷಲ್‌ : ಇಡೀ ವಿಶ್ವವೇ ಎದುರು ನೋಡುತ್ತಿದ್ದ ಸ್ಯಾಮ್‌ಸಾಂಗ್‌ M Series ಮೊಬೈಲ್‌ಗಳನ್ನು ಇಂದು ಬಿಡುಗಡೆ ಮಾಡಲಾಯಿತು.

ಟೆಕ್ನಿಕಲ್‌ ಗುರೂಜಿಯ ಗೌರವ್‌ ಚೌಧರಿ ಅಮೇಜಾನ್‌ನಿಂದ ಬಂದಂತ ಎಂ ಸೀರಿಸ್‌ ಮೊಬೈಲ್‌ ಪಾರ್ಸಲ್‌ ಕತ್ತರಿಸಿ ಒಪನ್‌ ಮಾಡುವ ಮೂಲಕ ಎಂ ಸಿರೀಸ್ ಮೊಬೈಲ್‌ ಬಿಡುಗಡೆ ಮಾಡಿದರು.

ಈ ಬಳಿಕ ಸ್ಯಾಮ್‌ಸಾಂಗ್‌ ಇಂಡಿಯಾದ ಉಪಾಧ್ಯಕ್ಷರಾದ ಸ್ಲ್ಯಾಮ್‌ ವಾರ್ಸ್‌ ಮತ್ತು ಉಪಾಧ್ಯಕ್ಷರಾದ ಮನೀಷ್‌ ತಿವಾರಿ ಅವರು, ಮೊಬೈಲ್‌ಗಳ ಬೆಲೆಯನ್ನು ತಿಳಿಸಿದರು.

ಸ್ಯಾಮ್‌ಸಾಂಗ್ ಗೆಲಾಕ್ಸಿ ಎಂ 20 ಹಾಗೂ ಎಂ 10 ಸೀರಿಸ್‌ ಫ್ಯೂಚರ್ಸ್‌

 1. ಸ್ಯಾಮ್‌ಸಾಂಗ್‌ ಗೆಲಾಕ್ಸಿ ಎಂ 20
 • 6.30 ವಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವಂತ ಡಿಸ್ಲೈ ಒಳಗೊಂಡಿರುವ Galaxy M20, 5 ಸಾವಿರ ಎಂಎಹೆಚ್‌ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
 • 3 ಫಾಸ್ಟ್‌ ಚಾರ್ಚಿಂಗ್‌ ಸಾಮರ್ಥ್ಯ ಹೊಂದಿದೆ.
 • ಕ್ಯಾಮರಾ – ಪ್ರೈಮೆರಿ ಕ್ಯಾಮರಾ 13 ಮೆಗಾ ಫಿಕ್ಸೆಲ್‌ ಹೊಂದಿದ್ದರೇ, ಸೆಕೆಂಡರಿ ಕ್ಯಾಮರಾ 5 ಮೆಗಾ ಫಿಕ್ಸೆಲ್‌ ಸಾಮರ್ಥ್ಯ ಹೊಂದಿದೆ. ಇಂತಹ ಕ್ಯಾಮರಾದಲ್ಲಿ 120 ಡಿಗ್ರಿ ವ್ಯಾಪ್ತಿಯಲ್ಲಿ ಕಡಿಮೆ ಬೆಳಕಿನಲ್ಲೂ ಅತ್ಯಧ್ಬುತವಾದ ಚಿತ್ರವನ್ನು ಸೆರೆ ಹಿಡಿಯಬಹುದಾಗಿದೆ.
 • Galaxy M20 ಸೀರಿಸ್‌ ಮೊಬೈಲ್‌ನಲ್ಲಿ 3ಜಿಬಿ RAM ಮತ್ತು 4 ಜಿಬಿ RAM ಸಾಮರ್ಥ್ಯದ ಎರಡು ಮಾದರಿಗಳಿವೆ.
 • 3 ಜಿಬಿ RAM ಸಾಮರ್ಥ್ಯದ ಮೊಬೈಲ್‌ನಲ್ಲಿ 32 ಜಿಬಿ ಸಾಮರ್ಥ್ಯದ ಮೆಮೊರಿ ಹೊಂದಿದೆ. 4 ಜಿಬಿ RAM ಹೊಂದಿರುವ ಮೊಬೈಲ್‌ನಲ್ಲಿ 64 ಜಿಬಿ ಸಾಮರ್ಥ್ಯದ ಮೆಮೊರಿ ಹೊಂದಿದೆ.
 • ಇದಲ್ಲದೇ ಇನ್ನೂ ನೀವು 512 ಜಿಬಿ ಸಾಮರ್ಥ್ಯದ ಮೆಮೊರಿಯನ್ನು ಹೆಚ್ಚಿಸಿಕೊಳ್ಳಬಹುದಾದ ಅವಕಾಶವನ್ನು ನೀಡಲಾಗಿದೆ.
 • 360 ಡಿಗ್ರಿ ಸರೌಂಡಿಂಗ್‌ ಆಡಿಯೋ ಗ್ರಹಿಸುವ ಸಾಮರ್ಥ್ಯ ಈ ಮೊಬೈಲ್‌ನಲ್ಲಿದ್ದು, ಫವರ್‌ಪುಲ್‌ ಎಂಟಟ್ರೈನ್‌ಮೆಂಟ್‌ ನಿಮಗೆ ದೊರೆಯಲಿದೆ.
 • ಗ್ಯಾಲಾಕ್ಸಿ ಎಂ ಸೀರಿಸ್‌ ಮೊಬೈಲ್‌ ಬ್ಲೂ ಮತ್ತು ಬ್ಲಾಕ್‌ ಎರಡು ಮಾದರಿಯಲ್ಲಿ ಲಭ್ಯವಿದೆ.
 • Galaxy M 20 ಮೊಬೈಲ್‌ ಬೆಲೆ – 3GB RAM, 32GB ಮೆಮೊರಿ ಒಳಗೊಂಡಿರುವ ಮೊಬೈಲ್‌ ಬೆಲೆ, ರೂ.10,990 ಮಾತ್ರ. 4GB RAM, 64GB ಮೆಮೊರಿ ಒಳಗೊಂಡಿರುವ ಮೊಬೈಲ್ ಬೆಲೆ  ರೂ.12,990 ಮಾತ್ರ

2. ಸ್ಯಾಮ್‌ಸಾಂಗ್ ಗ್ಯಾಲಾಕ್ಸಿ ಎಂ 10 ಸೀರಿಸ್

 • 6.22 ಗಾತ್ರದ ಡಿಸ್ಪ್ಲೆ ಹೊಂದಿದೆ.
 • ಕ್ಯಾಮರಾ – ಪ್ರೈಮೆರಿ ಕ್ಯಾಮರಾ 13 ಮೆಗಾ ಫಿಕ್ಸೆಲ್‌, ಸೆಕೆಂಡರಿ ಕ್ಯಾಮರಾ 5 ಮೆಗಾಫಿಕ್ಸೆಲ್‌ ಒಳಗೊಂಡಿದೆ.
 • 1.6 GHz ಪ್ರೊಸೆಸರ್ ಮೂಲಕ ಕಾರ್ಯ ನಿರ್ವಹಿಸಲಿದೆ.
 • ಗ್ಯಾಲಾಕ್ಸಿ ಎಂ 10ನಲ್ಲಿ ಎರಡು ಮಾದರಿಗಳ ಮೊಬೈಲ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಒಂದು 2GB RAM, 16GB ಮೆಮೊರಿ ಒಳಗೊಂಡಿದ್ದರೇ, ಮತ್ತೊಂದು 3GB RAM, 32GB ಮೆಮೊರಿ ಒಳಗೊಂಡಿದೆ.
 • 3400 mAh ಬ್ಯಾಟರಿ ಸಾಮರ್ಥ್ಯ
 • ಬ್ಲೂ ಮತ್ತು ಬ್ಲಾಕ್‌ ಎರಡು ಕಲರ್‌ಗಳಲ್ಲಿ ಮೊಬೈಲ್ ಲಭ್ಯ
 • ಈ ಎರಡೂ ಮೊಬೈಲ್‌ 7.7MM Ultra Slim ಆಗಿದೆ.
 • 2GB RAM, 16GB ಮೆಮೊರಿ ಹೊಂದಿರುವ ಸ್ಯಾಮ್‌ಸಾಂಗ್‌ ಗ್ಯಾಲಾಕ್ಸಿ ಎಂ 10 ಬೆೆಲೆ ರೂ.7,990 ಹಾಗೂ 3GB RAM, 32GB ಮೆಮೊರೆ ಹೊಂದಿರುವ ಮೊಬೈಲ್ ಬೆಲೆ, ರೂ.8,990

ಅಂದಹಾಗೆ ಈ Samsung Galaxy M20 ಮತ್ತು Samsung Galaxy M10 ಎರಡು ಮಾದರಿಯ ಮೊಬೈಲ್‌ಗಳ ಉತ್ಪಾದನೆ, ಭಾರತದಲ್ಲೇ ಆಗಿದೆ. ಅಂದ್ರೆ, Manufacturing in India.

ಓ ಈಗ ಇಂತಹ ಮೊಬೈಲ್‌ ಯಾವಾಗ ಕೊಂಡುಕೊಳ್ಳಬಹುದು ಎಂಬ ಅತಿಯಾದ ಕುತೂಹಲ ಹುಟ್ಟಿರಬೇಕಲ್ವಾ..? ಕೇಳಿ.. ಈ Samsung Galaxy M20 ಮತ್ತು Samsung Galaxy M10 ಎರಡು ಮಾದರಿಯ ಮೊಬೈಲ್‌ಗಳನ್ನು ಫೆಬ್ರವರಿ 5ರ 12 ಗಂಟೆಗೆ ಅಮೆಜಾನ್‌ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ನೀವು ಹೀಗೆ Samsung Galaxy M20 ಮತ್ತು Samsung Galaxy M10 ಎರಡು ಮಾದರಿಯ ಮೊಬೈಲ್‌ಗಳಲ್ಲಿ ಯಾವುದಾದರೂ ಖರೀದಿಸಿದರೇ, ಇದರೊಟ್ಟಿಗೆ ನಿಮಗೆ ಡಬಲ್ ಡಾಟಾ ಜಿಯೋ ಆಫರ್‌ ಕೂಡ ಸಿಗಲಿದೆ.

ಸೋ ಇನ್ಯಾಕೆ ತಡ.. ಇದೇ ನಿರ್ಧಾರ ಮಾಡಿ.. ಫೆಬ್ರವರಿ 5ರ, 12PM ರಂದು ಅಮೇಜಾನ್‌ ಆನ್‌ಲೈನ್‌ ವೆಬ್‌ಸೈಟ್‌ನಲ್ಲಿ ಆರ್ಡರ್‌ ಮಾಡಿ…

ವಸಂತ ಬಿ ಈಶ್ವರಗೆರೆ, ನ್ಯೂಸ್‌ ಡೆಸ್ಕ್‌, ಟಿವಿ5

Recommended For You

About the Author: Dayakar

Leave a Reply

Your email address will not be published. Required fields are marked *