ಶೋಭಕ್ಕರನ್ನು ಯಡಿಯೂರಪ್ಪ ಚೆನ್ನಾಗಿ ನೋಡಿಕೊಳ್ಳಲಿ: ರೇವಣ್ಣ

ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲಾ, ಯಡಿಯೂರಪ್ಪ ರಾಜ್ಯದ ಹಿತ ಕಾಪಾಡಬೇಕು, ಯಡಿಯೂರಪ್ಪ ಇದೇ ರೀತಿ ಆಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.

ಮಾನ ಮರ್ಯಾದೆ ಇದ್ದರೆ ಬಿಜೆಪಿ ಬರ ನೀಗಿಸಲಿ

ಹಾಸನದಲ್ಲಿ ಮಾತನಾಡಿದ ಅವರು, ಇನ್ನೂ ಒಂದುವಾರ ಬೇಕಿದರೆ ಶಾಸಕರನ್ನು ದೆಹಲಿಯಲ್ಲಿಯೇ ಇಟ್ಟುಕೊಳ್ಳಲಿ, ಎಲ್ಲಾ ಶಾಸಕರಿಗೆ ಇನ್ನೂ ಹೆಚ್ಚಿನ ಸೌಲಭ್ಯ ನೀಡಲಿ, ಮಾನ ಮರ್ಯಾದೆ ಇದ್ದರೆ ಬಿಜೆಪಿ ಬರ ನೀಗಿಸಲಿ, ಹೋಟೆಲ್ ನಲ್ಲಿ ಕುಳಿತು ಮಜಾ ಮಾಡೋದಲ್ಲಾ,ಸಿಎಂ ನಾಲ್ಕು ಬಾರಿ ಕೇಂದ್ರಕ್ಕೆ ಬರದ ಬಗ್ಗೆ ಪತ್ರ ಬರೆದಿದ್ದೇವೆ ಆದರೆ ಸ್ಪಂದಿಸಿಲ್ಲಾ ಎಂದರು.

ಶೋಭಕ್ಕರನ್ನು ಯಡಿಯೂರಪ್ಪ ರವರು ಚೆನ್ನಾಗಿ ನೋಡಿಕೊಳ್ಳಲಿ

ಸಂಸದೆ ಶೋಭ ಕರಂದ್ಲಾಜೆ ವಿರುದ್ದ ರೇವಣ್ಣ ವ್ಯಂಗ್ಯವಾಗಿ ಮಾತನಾಡಿದ್ದು, ದೇವೇಗೌಡ ಮತ್ತು ಮಕ್ಕಳದು ಆಡಂಬರದ ಜೀವನ ಎಂದು ಬಿಜೆಪಿ ಟ್ವೀಟ್ ವಿಚಾರವಾಗಿ ,ಶೋಭಕ್ಕರನ್ನು ಯಡಿಯೂರಪ್ಪ ರವರು ಚೆನ್ನಾಗಿ ನೋಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ಶೋಭಕ್ಕನಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಕೊಡಿಸಲಿ,ಶೋಭಕ್ಕ ಮಹಿಳಾ ಮೀಸಲಾತಿ ಬಗ್ಗೆ ಹೋರಾಡಲಿ, ಶೋಭಾ ಕರಂದ್ಲಾಜೆ ಹಾಸನಕ್ಕೆ ಲೋಕಸಭಾ ಚುನಾವಣಾ ಅಭ್ಯರ್ಥಿ ವಿಚಾರಕ್ಕೆ ಪ್ರತಿಕ್ರಿಯೇ ನೀಡಿದ ಅವರು, ಶೋಭಕ್ಕ ಹಾಸನಕ್ಕೆ ಬರಲಿ ಸ್ವಾಗತ, ನಮ್ಮ ಶೋಭಕ್ಕ ಬರಲಿ ಯಡಿಯೂರಪ್ಪ ಚೆನ್ನಾಗಿ ನೋಡಿಕೊಂಡು ಕೇಂದ್ರದಲ್ಲಿ ಮಂತ್ರಿಗಿರಿ ಕೊಡಿಸಲಿ ಎಂದು ರೇವಣ್ಣ ಹೇಳಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *