ಬಿಜೆಪಿ ಏಪ್ರಿಲ್ ಪೂಲ್ ಮಾಡೂಕೇ ಹೋಗಿ ಜನವರಿ ಪೂಲ್ ಮಾಡ್ತಿದ್ದಾರೆ : ರೇವಣ್ಣ

ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲಾ, ಕುಮಾರಣ್ಣನ ಸರ್ಕಾರ ಐದು ವರ್ಷ ಪೂರೈಸುತ್ತೆ, ಯಾರೂ ತಲೆಕೆಡಿಸಿಕೊಳ್ಳಬೇಡಿ ಎಂದು ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.

ಎಪ್ರೀಲ್ ಪೂಲ್ ಮಾಡೂಕೇ ಹೋಗಿ ಜನವರಿ ಪೂಲ್ ಮಾಡಿದ್ದಾರೆ

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು, ಯಾವುದೇ ಟಿವಿಗಳಲ್ಲಿ ಏನೇ ಸುದ್ದಿ ಬಂದರೂ ಅದು ಪ್ರಯೋಜನವಿಲ್ಲಾ, ಬಿಜೆಪಿಯವರಿಗೆ ಮಾಡೋಕೆ ಕೆಲಸ ಇಲ್ಲಾ, ಎಪ್ರೀಲ್ ಪೂಲ್ ಮಾಡೂಕೇ ಹೋಗಿ ಜನವರಿ ಪೂಲ್ ಮಾಡಿದ್ದಾರೆ ಅಷ್ಟೇ, ಕೇಂದ್ರದಿಂದ ಯಾವ ಅನುದಾನ ಬರುತ್ತೆ ಅಂತಾ ಬಿಜೆಪಿಯವರು ಮೊದಲು ತಿಳಿದುಕೊಳ್ಳಲಿ ಎಂದರು.

ಗ್ರಾಮೀಣ ಭಾಗದಲ್ಲಿ ಪೆಟ್ಟಿಗೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದು, ಹಾಸನ ಜಿಲ್ಲೆ ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಹಾಸನದ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಬೆಂಗಳೂರಿನಿಂದ ಹೊಸ ತಂಡ ನೇಮಿಸಿ ಕಾರ್ಯಾಚರಣೆ ಮಾಡಿಸುತ್ತೆವೆ ಎಂದರು, ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟದಿಂದ ಎಲ್ಲಾ ಬಡ ಕುಟುಂಬಗಳಿಗೆ ತೊಂದರೆಯಾಗುತ್ತಿದೆ ಎಂದು ರೇವಣ್ಣ ಮಾತನಾಡಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *