ಮದುವೆಯಾಗುತ್ತಿರುವ ಮೋದಿ ಫ್ಯಾನ್ಸ್ ಮಾಡಿದ್ದೇನು ಗೊತ್ತಾ..?

ಅಹಮದಾಬಾದ್: ಇಲ್ಲಿ ಕೊಟ್ಟಿರುವ ಮದುವೆ ಆಮಂತ್ರಣ ಪತ್ರಿಕೆಯನ್ನ ಒಮ್ಮೆ ಸರಿಯಾಗಿ ನೋಡಿ. ಮೊದಲು ಮಧುಮಕ್ಕಳ ಹೆಸರು. ನಂತರ ಗಣೇಶನ ಫೋಟೋ, ಕಡೆಗೆ ಸ್ವರ್ಗದಲ್ಲಿ ಮದುವೆ ಹೇಗೆ ನಡೆಯುತ್ತೆ ಎನ್ನುವ ಬಗ್ಗೆ ಸ್ವಲ್ಪ ವಿವರಣೆ. ಆದರೆ ನೀವು ಕೊನೆಯಲ್ಲಿ ನೋಡಿದಾಗ, ಈ ವೆಡ್ಡಿಂಗ್‌ ಕಾರ್ಡ್‌ನ ಸ್ಪೆಶಾಲಿಟಿ ನಿಮಗೆ ಕಾಣತ್ತೆ.

ಗುಜರಾತ್‌ನ ಸೂರತ್‌ನವರಾದ ಯುವರಾಜ್ ಮತ್ತು ಸಾಕ್ಷಿ ಎಂಬ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳಾಗಿದ್ದಾರೆ. ತಮ್ಮ ಮದುವೆಗೆ ಆಗಮಿಸುವವರು ತಮಗೆ ಉಡುಗೊರೆ ನೀಡದಿದ್ದರೂ ಪರವಾಗಿಲ್ಲ. ಆದರೆ ನರೇಂದ್ರ ಮೋದಿ ಆ್ಯಪ್ ಡೌನ್‌ಲೋಡ್ ಮಾಡಿ, ಮೋದಿಗೆ ಓಟ್ ಹಾಕಿ ಗೆಲ್ಲಿಸಿ ಎಂದು ವಿನಂತಿಸಿದ್ದಾರೆ.

ಅಲ್ಲದೇ ವೆಡ್ಡಿಂಗ್ ಕಾರ್ಡ್‌ನ ಇನ್ನೊಂದು ಬದಿಗೆ ರಫೆಲ್‌ ಡೀಲ್ ಬಗ್ಗೆ ವಿವರಣೆ ನೀಡಲಾಗಿದೆ. ಒಟ್ಟಾರೆಯಾಗಿ ಪ್ರಧಾನಿ ಮೋದಿ ಫ್ಯಾನ್ ಆಗಿರುವ ಈ ಜೋಡಿ, ಮೋದಿಯನ್ನ ಮತ್ತೊಮ್ಮೆ ಪ್ರಧಾನಿ ಮಾಡೋಕ್ಕೆ ಸಖತ್ ಪ್ಲಾನ್ ಮಾಡಿದೆ.

Recommended For You

About the Author: Dayakar

Leave a Reply

Your email address will not be published. Required fields are marked *