ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಖಾಯಿಲೆಗೆ ಫ್ರಿ ಚಿಕಿತ್ಸೆ

ಮೈಸೂರು: 5 ವರ್ಷಗಳ ಕಾಲ ಉಚಿತವಾಗಿ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆ ಕೊಡಿಸಲಾಗುತ್ತದೆಂದು ಶಾಸಕ ರಾಮ್‌ದಾಸ್ ಪಾದಯಾತ್ರೆ ಮೂಲಕ ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ ಪಾದಯಾತ್ರೆ ನಡೆಸಿದ ಕೆ.ಆರ್.ಕ್ಷೇತ್ರದ ಶಾಸಕ ರಾಮ್‌ದಾಸ್, ಆರೋಗ್ಯ ಸೇವೆ ಬಗ್ಗೆ ಮಾಹಿತಿ ನೀಡಿದ್ದಾರೆ. ನಂಜುಮಳಿಗೆಯ ಮಾರುಕಟ್ಟೆಯಲ್ಲಿ ಉಚಿತ ಆರೋಗ್ಯ ಸೇವೆ ದೊರಕಲಿದ್ದು, ಜನವರಿ 6ಕ್ಕೆ ಬೃಹತ್ ಆರೋಗ್ಯ ಯೋಜನೆ ಶುರುವಾಗಲಿದೆ ಎಂದಿದ್ದಾರೆ.

ಇದು ರಾಜ್ಯದಲ್ಲೇ ಮೊದಲ ಬಾರಿ ಉಚಿತ ಆರೋಗ್ಯ ಸೇವೆ ಪ್ರಾರಂಭವಾಗಲಿದ್ದು, ಸತತ 5 ವರ್ಷಗಳ ಕಾಲ ಕ್ಯಾನ್ಸರ್, ಹೃದಯ ಸಂಬಂಧಿ ಖಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಈ ಬಗ್ಗೆ ಕರಪತ್ರ ಹಂಚಿ ಶಾಸಕ ರಾಮ್‌ದಾಸ್ ಜನರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಈ ಸೇವೆಗೆ ಕೇಂದ್ರ ಸರ್ಕಾರದ ಸಹಕಾರ ಪಡೆಯಲಾಗಿದೆ.

ತಿಂಗಳಲ್ಲಿ ಮೊದಲನೇ ಭಾನುವಾರ ಮತ್ತು ಮೂರನೇ ಭಾನುವಾರದಲ್ಲಿ ಆರೋಗ್ಯ ತಪಾಸಣೆ ನಡೆಯಲಿದ್ದು, ಬಡವರಿಗಾಗಿ ಕೆ.ಆರ್.ಕ್ಷೇತ್ರದಲ್ಲಿ ಉಚಿತ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದು ಸಾವಿರಾರು ಬಡ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ರಾಮ್‌ದಾಸ್ ತಿಳಿಸಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *