ಹೆಲ್ದಿ ಕ್ಯಾರೆಟ್ ಸೂಪ್ ತಯಾರಿಸುವುದು ಹೇಗೆ ಗೊತ್ತಾ..?

ಹಸಿವಾದಾಗ ಟೀ, ಕಾಫಿ, ಜಂಕ್‌ಪುಡ್ ಸೇವನೆ ಬದಲು ಹಣ್ಣು, ಒಣ ಹಣ್ಣು,ತರಕಾರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಆದರೆ ಕೆಲವರು ರುಚಿಕರವಾಗಿಯೂ, ಆರೋಗ್ಯಕರವಾಗಿಯೂ ಆಹಾರವನ್ನು ಸೇವಿಸಲು ಬಯಸುತ್ತಾರೆ. ಅಂಥವರು ತರಕಾರಿ ಸೂಪ್‌ಗಳನ್ನು ಸೇವಿಸಬಹುದು.ಇವತ್ತು ನಾವು ನಿಮಗೆ ಕ್ಯಾರೆಟ್ ಸೂಪ್ ತಯಾರಿಸುವುದು ಹೇಗೆ ಅನ್ನೋದನ್ನ ಹೇಳಿದ್ದೇವೆ ಓದಿ…

ಬೇಕಾಗುವ ಸಾಮಗ್ರಿ: 2 ಕ್ಯಾರೆಟ್, 1ಆಲೂಗಡ್ಡೆ, 4 ಎಸಳು ಬೆಳ್ಳುಳ್ಳಿ, 1ಈರುಳ್ಳಿ, ಪೆಪ್ಪರ್ ಪೌಡರ್, 2 ಎಸಳು ಪುದೀನಾ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಸ್ಪೂನ್ ಎಣ್ಣೆ, ಅಗತ್ಯವಿದ್ದಷ್ಟು ನೀರು.

ಮಾಡುವ ವಿಧಾನ: ಕುಕ್ಕರ್‌ಗೆ ಒಂದು ಸ್ಪೂನ್ ಎಣ್ಣೆ ಹಾಕಿ, ಅದಕ್ಕೆ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ. ಅದಕ್ಕೆ ಕ್ಯಾರೆಟ್, ಆಲೂಗಡ್ಡೆ, ಉಪ್ಪು ಹಾಕಿ ಮತ್ತೆ ಚೆನ್ನಾಗಿ ಬಾಡಿಸಿ. ನಂತರ ಎರಡು ಕಪ್ ನೀರು ಹಾಕಿ ಎರಡು ಪುದೀನಾ ಎಲೆ ಹಾಕಿ ನಾಲ್ಕು ವಿಶಲ್ ಬರುವವರೆಗೂ ಬೇಯಿಸಿ.

15-20 ನಿಮಿಷ ಬಿಟ್ಟು, ತರಕಾರಿ ಜೊತೆ ಬೇಯಿಸಿದ ಪುದೀನಾ ಹೊರ ತೆಗೆಯಿರಿ. ನಂತರ ತರಕಾರಿ ಮಿಶ್ರಣವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಒಂದು ಪ್ಯಾನ್‌ಗೆ ರುಬ್ಬಿಕೊಂಡ ಮಿಶ್ರಣ ಮತ್ತು ಕುಕ್ಕರ್‌ನಲ್ಲಿ ಉಳಿದಿದ್ದ ತರಕಾರಿ ನೀರಿನ ಮಿಶ್ರಣ ಬೇರೆಸಿ ಕುದಿಸಿ, ಕೊನೆಗೆ ಅದಕ್ಕೆ ಪೆಪ್ಪರ್ ಪೌಡರ್ ಸೇರಿಸಿ, ಸರ್ವ್ ಮಾಡಿ.

Recommended For You

About the Author: Dayakar

Leave a Reply

Your email address will not be published. Required fields are marked *