ಜೇನುತುಪ್ಪ ಸೇವನೆಯ 10 ಲಾಭಗಳು

ನಿಸರ್ಗದಿಂದ ಸಿಕ್ಕ ಉಡುಗೊರೆಗಳಲ್ಲಿ ಒಂದಾದ ಜೇನುತುಪ್ಪದ ಸೇವನೆಯಿಂದ ಹಲವು ಲಾಭಗಳಿದೆ. ಇದು ಆರೋಗ್ಯಕಾರಿ ಅಷ್ಟೇ ಅಲ್ಲದೇ ಸೌಂದರ್ಯವರ್ಧಕವೂ ಆಗಿದೆ.

1..ಜೇನುತುಪ್ಪ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಮತ್ತು ಇದು ಮಲಬದ್ಧತೆ ತಡೆಗಟ್ಟುವುದರಲ್ಲಿ ಸಹಕಾರಿಯಾಗಿದೆ.

2..ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿಗೆ, ಜೇನುತುಪ್ಪ ಮತ್ತು ನಿಂಬೆರಸ ಸೇರಿಸಿ ಕುಡಿಯುವುದರಿಂದ ಬೊಜ್ಜಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

3..ಗಂಟಲು ಕೆರೆತ, ಕೆಮ್ಮಿನ ಸಮಸ್ಯೆಗೂ ಜೇನುತುಪ್ಪ ರಾಮಬಾಣವಾಗಿದೆ.

4..ಜೇನುತುಪ್ಪದ ಸೇವನೆಯಿಂದ ದೇಹದಲ್ಲಿ ರಕ್ತಸಂಚಾರ ಸರಾಗವಾಗುತ್ತದೆ.

5..ವರ್ಕೌಟ್ ಮಾಡಿದ ನಂತರ ಜೇನು ಸೇವಿಸುವುದರಿಂದ ಉಲ್ಲಸಿತವಾಗಿರಬಹುದಲ್ಲದೇ, ಆರೋಗ್ಯಕ್ಕೂ ಒಳ್ಳೆಯದು.

6..ಜೇನುತುಪ್ಪದ ಸೇವನೆಯಿಂದ ನಿದ್ರಾಹೀನತೆ ತಡೆಗಟ್ಟಬಹುದು.

7…ಜೇನುತುಪ್ಪದ ಸೇವನೆ ಚರ್ಮದ ರಕ್ಷಣೆ ಮಾಡುವಲ್ಲಿ ಕಾರ್ಯನಿರ್ವಹಿಸುತ್ತದೆ.

8..ಬ್ರೇಡ್‌ ತಿನ್ನುವಾಗ ಅದಕ್ಕೆ ಜಾಮ್, ಚಾಕೋಲೇಟ್ ಸಾಸ್ ಹಾಕಿಕೊಂಡು ತಿನ್ನುವ ಬದಲು, ಜೇನುತುಪ್ಪದ ಜೊತೆ ತಿನ್ನಿ. ಇದರಿಂದ ಆಹಾರದ ರುಚಿಯು ಹೆಚ್ಚುವುದಲ್ಲದೇ, ದೇಹಕ್ಕೆ ಶಕ್ತಿ ಒದಗುತ್ತದೆ.

9.. ಪೇಯ ಕುಡಿಯುವಾಗ ಅದರಲ್ಲಿ ಸಕ್ಕರೆ ಬಳಸುವ ಬದಲು ಜೇನುತುಪ್ಪ ಬಳಸಿ.(ಜ್ಯೂಸ್,ನಿಂಬೆ ಹಣ್ಣಿನ ಪಾನಕ, ಹಾಲು, ಟೀ)

10..ಕ್ಯಾನ್ಸರ್‌ನಂಥ ಮಾರಕ ರೋಗಗಳ ಜೊತೆ ಹೋರಾಡಲು ಜೇನುತುಪ್ಪ ಸಹಕಾರಿಯಾಗಿದೆ.

Recommended For You

About the Author: Dayakar

Leave a Reply

Your email address will not be published. Required fields are marked *