ಹೃದಯ, ಕಿಡ್ನಿ, ಲಿವರ್‌ ಆಯ್ತು ಈಗ ಕೈಗಳ ಕಸಿ..!

ಪಾಂಡಿಚೇರಿ ಜಿಪ್ಮರ್‌ ಆಸ್ಪತ್ರೆ ತಜ್ಞ ವೈದ್ಯರು ಹಾಗೂ ನಾರಾಯಣ ಹೆಲ್ತ್‌ ಸಿಟಿ ವೈದ್ಯರ ನೆರವಿನಿಂದ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೈಗಳ ಕಸಿಯನ್ನು ನಡೆಸಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಮೂಲದ ವಿಕಾಸ್‌ ಕುಮಾರ್‌ ಎಂಬ ಯುವಕ ಬೈಕ್ ಅಪಘಾತವಾಗಿ ಗಂಭೀರವಾಗಿ ಗಾಯಗೊಂಡಿದ್ದನು. ಕಳೆದ ಮೂರು ದಿನಗಳ ಹಿಂದೆ ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆ ಸೇರಿದ್ದ, ಆತನನ್ನು ಉಳಿಸಲು ಎಲ್ಲಾ ಪ್ರಯತ್ನ ವಿಫಲವಾಯಿತು. ಮೆದುಳು ನಿಷ್ಕಿಯಗೊಂಡ ಬಳಿಕ ಯುವಕನ ಪೋಷಕರಿಗೆ ತಿಳಿಸಿದರು.

ನಂತರ ಪೋಷರಿಗೆ ಅಂಗಾಂಗ ಕಸಿ ಬಗ್ಗೆಯೂ ಸಂಬಂಧಿಕರಿಗೆ ವಿಷ್ಯ ತಿಳಿಸಿ ರೋಗಿಯ ಹೃದಯ, ಎರಡು ಕಿಡ್ನಿ, ಲಿವರ್ ಮತ್ತು ಕೈಗಳನ್ನು ಪಡೆದು,ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಧ್ಯಪ್ರದೇಶದ ಅಂಜಲ್ ಶುಕ್ಲಾ ಎಂಬುವವರಿಗೆ ಹೃದಯ ಕಸಿ ಮತ್ತು ಮತ್ತಿಬ್ಬರು ರೋಗಿಗಳಿಗೆ ಒಂದು ಕಿಡ್ನಿ ಮತ್ತು ಲಿವರ್ ಕಸಿ ಮಾಡಲಾಗಿದೆ. ಒಂದು ಕಿಡ್ನಿ ಮಾತ್ರ ಮೈಸೂರಿನ ಅಪೋಲೊ ಆಸ್ಪತ್ರೆಗೆ ರೋಗಿಗೆ ಕಸಿ ಮಾಡಲು ರವಾನಿಸಲಾಗಿದೆ.

ಇತರರು ಅಂಗಾಂಗ ದಾನಕ್ಕೆ ಮುಂದಾಗಬೇಕು. ಜೊತೆಗೆ ಕುಟುಂಬಕ್ಕೆ ಆಧಾರವಾಗಿದ್ದ ಮಗ ಕಳೆದುಕೊಂಡು ಅನಾಥರಾಗಿದ್ದು, ಮನೆಯಲ್ಲಿ ಒಬ್ಬರಿಗೆ ಕೆಲಸ ಕೊಡಿಸಿ ಎಂದು ರಾಜ್ಯ ಸರ್ಕಾರಕ್ಕೆ ದಾನಿಗಳ ಕುಟುಂಬ ಮನವಿ ಮಾಡಿದೆ.

ಒಟ್ಟಿನಲ್ಲಿ ನಾರಾಯಣ ಹೆಲ್ತ್ ಸಿಟಿ ಮತ್ತು ಪಾಂಡಿಚೇರಿ ಜಿಪ್ಮರ್ ಆಸ್ಪತ್ರೆ ವೈದ್ಯರು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೈಗಳ ಕಸಿ ಮಾಡುವ ಮೂಲಕ ಅಪರೂಪದ ಸಾಧನೆ ಮಾಡಿದ್ದು, ಅವಘಡಗಳಲ್ಲಿ ಕೈಕಾಲು. ಕಳೆದುಕೊಂಡವರಿಗೆ ವರದಾನವಾಗಲಿದೆ. ಜೊತೆಗೆ ಮೃತನ ಕುಟುಂಬದವರು ಸಹ ಅಂಗಾಂಗ ದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *