ತುಪ್ಪದ ಬಳಕೆ ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

ಇಂದಿನ ಕಾಲದಲ್ಲಿ ತೂಕ ಇಳಿಸಿಕೊಳ್ಳಲು ಜನ ಪರದಾಡುವಂತಾಗಿದೆ. ಜಿಮ್‌ಗೆ ಹೋಗುವುದು, ಕರಿದ ಪದಾರ್ಥ, ಸಿಹಿ ಪದಾರ್ಥಗಳನ್ನು ತ್ಯಜಿಸುತ್ತಾರೆ. ಜೊತೆಗೆ ಆರೋಗ್ಯಕ್ಕೆ ಅಮೃತ ಎನ್ನುವಂಥಹ ತುಪ್ಪದ ಸೇವನೆ ಕೂಡ ತ್ಯಜಿಸಿಬಿಡುತ್ತಾರೆ. ಆದರೆ ತುಪ್ಪ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಎಂಬುದು ಸುಳ್ಳು ಎನ್ನುತ್ತದೆ ಆಯುರ್ವೇದ.

ಆಯುರ್ವೇದದ ಪ್ರಕಾರ ತುಪ್ಪ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿದೆ. ಕಟ್ಟುಮಸ್ತಾದ ದೇಹ ಹೊಂದಲು, ಸುಂದರ ತ್ವಚೆಗಾಗಿ, ಕೂದಲ ಆರೋಗ್ಯಕ್ಕಾಗಿ ತುಪ್ಪದ ಉಪಯೋಗ ಲಾಭಕಾರಿಯಾಗಿದೆ. ಅದರಲ್ಲೂ ಎಮ್ಮೆಯ ಹಾಲಿನಿಂದ ಮಾಡಿದ ತುಪ್ಪಕ್ಕಿಂತ, ದೇಶಿಯ ತಳಿಯ ಆಕಳಿನ ಹಾಲಿನಿಂದ ಮಾಡಿದ ತುಪ್ಪ ಸೇವಿಸಿದ್ದಲ್ಲಿ ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು.

1..ನೆನಪಿನ ಶಕ್ತಿ, ಚುರುಕುತನವಿಲ್ಲದವರು ಹಾಲಿನೊಂದಿಗೆ ಸ್ವಲ್ಪ ತುಪ್ಪ ಬೆರೆಸಿ ಕುಡಿಯಬಹುದು. ಬಹುತೇಕ ವಿದ್ಯಾರ್ಥಿಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವುದರಿಂದ ಅಂಥವರು ಇದನ್ನ ಬಳಸಬಹುದು.

2..ನಿದ್ರಾಹೀನತೆಯಿಂದ ಬಳಲುವವರು ಹಾಲಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರಿಂದ ಒಳ್ಳೆಯ ನಿದ್ದೆ ಮಾಡಬಹುದು.

3..ಒಂದೆರಡು ಹನಿ ತುಪ್ಪವನ್ನ ಮೂಗಿನಲ್ಲಿ ಹಾಕುವುದರಿಂದ ಶೀತ, ಕೆಮ್ಮು, ನಿಶ್ಯಕ್ತಿ, ಬಳಲುವಿಕೆಯಿಂದ ಮುಕ್ತಿ ಸಿಗುತ್ತದೆ.

4..ಆಯುರ್ವೇದದ ಪ್ರಕಾರ ತುಪ್ಪ ಹಳೆಯದಾದಷ್ಟು ಅದರಲ್ಲಿ ಔಷಧಿಯ ಅಂಶ ಹೆಚ್ಚಾಗುತ್ತದೆ. ಫ್ರೆಶ್ ಆಗಿರುವ ತುಪ್ಪಕ್ಕಿಂತ, ವರ್ಷಗಳ ಹಿಂದೆ ಮಾಡಿದ ತುಪ್ಪ ಉಪಯೋಗಿಸಿದರೆ ತುಂಬ ಲಾಭಕಾರಿ. ಆದರೆ ತುಪ್ಪವನ್ನು ಹೇಗೆ ಸಂಸ್ಕರಿಸಿ ಇಡುತ್ತೇವೆಂಬುದರ ಮೇಲೆ ತುಪ್ಪ ಹಾಳಾಗದಿರುವುದು ಅವಲಂಬಿತವಾಗಿರುತ್ತದೆ. ಪ್ಲಾಸ್ಟಿಕ್ ಡಬ್ಬದಲ್ಲಿ ಇಡುವ ಬದಲು ಗಾಜಿನ ಡಬ್ಬದಲ್ಲಿ, ಅಥವಾ ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟರೆ ಹಲವು ದಿನಗಳವರೆಗೆ ತುಪ್ಪ ಹಾಳಾಗುವುದಿಲ್ಲ.

5..ಎಣ್ಣೆ ಉಪಯೋಗಕ್ಕಿಂತ, ತುಪ್ಪದ ಉಪಯೋಗ ಒಳ್ಳೆಯದು ಎನ್ನುತ್ತದೆ ಆಯುರ್ವೇದ.

6..ಹಲವು ಆಯುರ್ವೇದ ಔಷಧಿಗಳನ್ನು ಸಹ ತುಪ್ಪದಲ್ಲಿ ಹುರಿಯಲಾಗುತ್ತದೆ. ಆದರೆ ತುಪ್ಪವನ್ನು ಕರಿಯಲು ಅಥವಾ ಹುರಿಯಲು ಬಳಸುವುದಕ್ಕಿಂತ ಹಾಗೇ ಸೇವಿಸುವುದು ಆರೋಗ್ಯಕ್ಕೆ ಉತ್ತಮ.

7..ಇನ್ನು ತುಪ್ಪ ಸೌಂದರ್ಯವರ್ಧಕವಾಗಿಯೂ ಕಾರ್ಯನಿರ್ವಹಿಸುತ್ತದೆ.ತುಪ್ಪ ಮಾಯಿಶ್ಚರಾಯ್ಸರ್ ರೀತಿ ಕೆಲಸ ಮಾಡುವುದರಿಂದ, ಒಣತ್ವಚೆಯುಳ್ಳವರು ಕೆಲ ಹನಿ ತುಪ್ಪವನ್ನು ತ್ವಚೆಗೆ ಹಚ್ಚಿಕೊಳ್ಳಬಹುದು.

8..ಚಳಿಗಾಲದಲ್ಲಿ ತುಟಿ ಒಡೆಯುವುದು ಸಾಮಾನ್ಯ, ಈ ಸಮಸ್ಯೆಗೆ ತುಪ್ಪ ರಾಮಬಾಣವಾಗಿದೆ. ಹನಿ ತುಪ್ಪವನ್ನ ರಾತ್ರಿ ತುಟಿಗೆ ಹಚ್ಚುವುದರಿಂದ ತುಟಿಯ ಅಂದ ಕಾಪಾಡಿಕೊಳ್ಳಬಹುದು.

9..ತುಪ್ಪ ಮತ್ತು ಮೊಸರು ಬೆರೆಸಿ ತಿನ್ನುವಂತಿಲ್ಲ. ಹೀಗೆ ಮಾಡಿದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು. ಉದಾಹರಣೆಗೆ ರೊಟ್ಟಿ, ಅನ್ನ ಅಥವಾ ಚಪಾತಿಯೊಂದಿಗೆ ತುಪ್ಪ ಬೆರೆಸಿದ್ದಲ್ಲಿ ಮೊಸರು ಸೇವಿಸಬಾರದು. ಮೊಸರಿನಿಂದ ಮಾಡಿದ ಪದಾರ್ಥಕ್ಕೆ ತುಪ್ಪದ ಒಗ್ಗರಣೆ ಕೊಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

10..ತುಪ್ಪ ತಿಂದ ಮೇಲೆ ಅಥವಾ ತುಪ್ಪದಿಂದ ಮಾಡಿದ ಯಾವುದೇ ಪದಾರ್ಥ ಸೇವಿಸಿದ ಮೇಲೆ ತಣ್ಣಿರು ಕುಡಿಯುವಂತಿಲ್ಲ. ಇದರಿಂದ ಕೆಮ್ಮು , ಎದೆ ನೋವು ಇತ್ಯಾದಿ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ತುಪ್ಪ ಸೇವನೆಯ ನಂತರ ಬಿಸಿನೀರಿ ಸೇವನೆ ಅತ್ಯಗತ್ಯ.

ಹೆಚ್ಚಿಗೆ ಕುಡಿದರೆ ಅಮೃತವೂ ವಿಷವೇ ಎಂಬಂತೆ, ತುಪ್ಪದ ಸೇವನೆ ಅತಿಯಾದರೆ ದೇಹಕ್ಕೆ ಹಾನಿಯುಂಟಾಗುತ್ತದೆ.

Recommended For You

About the Author: Dayakar

Leave a Reply

Your email address will not be published. Required fields are marked *