ಬೆಳಗ್ಗೆ ಟೈಲರ್​, ರಾತ್ರಿ ಕೊಲೆಗಡುಕ: ಈತನಿಗೆ 33 ಬಲಿ

ಬೆಳಗ್ಗೆ ಬಟ್ಟೆ ಹೊಲಿಯುವ ಟೈಲರ್.. ರಾತ್ರಿಯಾಗುತ್ತಿದ್ದಂತೆ ಕೊಲೆಗಡುಕ…ಹೀಗೆ ಬದಲಾಗುತ್ತಿದ್ದ ವ್ಯಕ್ತಿ 33 ಚಾಲಕರನ್ನು ಕೊಲೆ ಮಾಡಿ ಈಗ ಜೈಲು ಕಂಬಿ ಎಣಿಸುತ್ತಿದ್ದಾನೆ.

ಹೌದು, ಮಧ್ಯಪ್ರದೇಶದ ಭೂಪಾಲ್​ನಲ್ಲಿ ಆದೇಶ್ ಕಾಮ್ರಾ ಎಂಬಾತನ ವಿಕೃತಿ ವಿಕೃತಿ. ಹೀಗೆ ಆತ ಹಲವು ರಾಜ್ಯಗಳಲ್ಲಿ ಕೊಲೆ ಮಾಡಿದ್ದು, ಈತನ ಗುರಿಯಾಗುತ್ತಿದ್ದುದ್ದು ಲಾರಿ ಚಾಲಕರು ಮತ್ತು ಸಹಾಯಕರು.

2010ರಲ್ಲಿ ಕೊಲೆ ಮಾಡುವುದಕ್ಕೆ ಆರಂಭಿಸಿದ ಅದೇಶ್‌ ಕಾಮ್ರಾ ಮೊದಲಿಗೆ ಅಮರಾವತಿಯಲ್ಲಿ ಕೊಲೆ ಮಾಡಿದ್ದ. ಬಳಿಕ ನಾಸಿಕ್‌ ಸೇರಿದಂತೆ ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರಗಳಲ್ಲಿ ಕೊಲೆ ಮಾಡಿದ್ದಾನೆ. ಆದರೆ ಈತ ಮಾಡಿರುವ ಕೊಲೆಗಳಿಗೆ ಯಾವುದೇ ಖಚಿತವಾದ ಕಾರಣ ಪತ್ತೆಯಾಗಿಲ್ಲ.

ಕಳೆದ ವಾರ ಸುಲ್ತಾನ್‌ಪುರ ಅರಣ್ಯ ಪ್ರದೇಶದಲ್ಲಿ ಮಹಿಳಾ ಪೊಲೀಸರ ಬಲೆಗೆ ಬಿದ್ದ ಕೊಲೆಗಟುಕ ಅದೇಶ್‌ ಕಾಮ್ರಾ ವಿಚಾರಣೆ ವೇಳೆ 33 ಮಂದಿಯನ್ನು ಕೊಂದಿರುವುದಾಗಿ ಬಾಯ್ಬಿಟ್ಟಿದ್ದಾನೆ.

ಟ್ರಕ್‌ ಚಾಲಕರನ್ನು ಕಾಮ್ರಾ ಕಡೆಯವರು ಲೂಟಿ ಮಾಡುತ್ತಿದ್ದರು. ಆಗ ಕಾಮ್ರಾ ಚಾಲಕರ ಕುತ್ತಿಗೆಗೆ ಹಗ್ಗ ಬಿಗಿಯುತ್ತಿದ್ದ, ಕೆಲವೊಮ್ಮೆ ಅವರ ಉಸಿರು ನಿಲ್ಲಿಸಲು ವಿಷ ನೀಡುತ್ತಿದ್ದ. ಕೊಂದ ಬಳಿಕ ಅವರ ಉಡುಪು ಸೇರಿದಂತೆ ಗುರುತು ಪತ್ತೆಗೆ ಕಾರಣವಾಗಬಹುದಾದ ಪ್ರತಿಯೊಂದನ್ನು ನಾಶಪಡಿಸಿ ಮೃತದೇಹಗಳನ್ನು ಗುಡ್ಡಗಾಡುಗಳಲ್ಲಿ ಇಲ್ಲವೇ ಮಣ್ಣಿನಡಿಗೆ ಎಸೆಯುತ್ತಿದ್ದ.

ಇತ್ತೀಚೆಗೆ ನಡೆದ ಎರಡು ಕೊಲೆ ಪ್ರಕರಣಗಳಲ್ಲಿ ಸಿಕ್ಕ ಸುಳಿವು ಆಧರಿಸಿ ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ 33 ಕೊಲೆಗಳನ್ನು ಮಾಡಿರುವುದಾಗಿ ಬಾಯಿಬಿಟ್ಟಿದ್ಧಾನೆ.  ಇದರಿಂದ ಸಣ್ಣ ಪ್ರಕರಣ ಎಂದು ಭಾವಿಸಿದ್ದ ಪೊಲೀಸರು ಈತನ ಆತಂಕಕಾರಿ ಮಾಹಿತಿಯಿಂದ ದೇಶದ ಅತ್ಯಂತ ದೊಡ್ಡ ಸರಣಿ ಕೊಲೆಗಡುಕನ ಬಂಧಿಸಿರುವುದು ತಿಳಿಯಿತು.

Recommended For You

About the Author: TV5 Kannada

Leave a Reply

Your email address will not be published. Required fields are marked *