Top

ಹೆಬ್ಬಾಳ್ಕರ್‌ಗೆ ಗೆಲುವು: ಜಾರಕಿಹೊಳಿ ಬ್ರದರ್ಸ್‌ಗೆ ಮುಖಭಂಗ

ಹೆಬ್ಬಾಳ್ಕರ್‌ಗೆ ಗೆಲುವು: ಜಾರಕಿಹೊಳಿ ಬ್ರದರ್ಸ್‌ಗೆ ಮುಖಭಂಗ
X

ಬೆಳಗಾವಿ: ಹಲವು ದಿನಗಳಿಂದ ಬೆಳಗಾವಿ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿದ್ದ ಜಗಳ ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಅಂತ್ಯಗೊಂಡಿದೆ.ಈ ಮೂಲಕ ಈಶ್ವರ್ ಖಂಡ್ರೆ ಸಂಧಾನ ಸಫಲಗೊಂಡಿದೆ.

ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಇದ್ದ ಪಿಎಲ್‌ಡಿ ಬ್ಯಾಂಕ್ ಎಲೆಕ್ಷನ್ ಜಗಳ ಸದ್ಯ ಅಂತ್ಯಗೊಂಡಿದೆ. ಮಹಾದೇವ ಪಾಟೀಲ್ ಅಧ್ಯಕ್ಷ, ಬಾಪುಸಾಹೇಬ್ ಜಮಾದಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇಬ್ಬರು ಬೆಳಗಾವಿ ಗ್ರಾಮೀಣ ಮತಕ್ಷೇತ್ರದವರಾಗಿದ್ದಾರೆ.

ಇನ್ನು ಈ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಸೇರಿ ಬೆಳಗಾವಿಯ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಬೆಳಗಾವಿ ಪಿ.ಎಲ್.ಡಿ ಬ್ಯಾಂಕ್ ಚುನಾವಣೆ ಅಭಿಪ್ರಾಯ ಭೇದ ಮತ್ತು ಸಂವಹನದ ಕೊರತೆಯಿಂದ ಮುಂದೂಡಲಾಗಿತ್ತು. ಸಚಿವ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜೊತೆ ಮಾತನಾಡಿ ಅತ್ಯಂತ ಸೌಹಾರ್ದತೆಯಿಂದ ಈ ವಿಷಯವನ್ನು ಬಗೆಹರಿಸಲಾಗಿದೆ ಎಂದರು.

ಅಲ್ಲದೇ ಇದರಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಮಹಾದೇವ ಪಾಟೀಲ್ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಬಾಪುಸಾಬ್ ಜಮಾದಾರ್ ಆಯ್ಕೆಯಾಗಿದ್ದಾರೆ. ಈ ಆಯ್ಕೆಗೆ ಎಲ್ಲರ ಸಹಮತವಿದೆ. ಹೀಗಾಗಿ ವರಿಷ್ಠರ ಸೂಚನೆ ಮೇರೆಗೆ ಈ ಆಯ್ಕೆ ನಡೆದಿದೆ. ಬೆಳಗಾವಿ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇದರಿಂದ ಸರಕಾರಕ್ಕೆ ಯಾವುದೇ ಅಪಾಯವಿಲ್ಲ ಹಾಗೂ ಸಮಸ್ಯೆ ಇಲ್ಲ. ಪಿ.ಎಲ್.ಡಿ ಬ್ಯಾಂಕ್ ಚುನಾವಣೆ ಸಣ್ಣ ಚುನಾವಣೆ. ಸೌಹಾರ್ದತೆಯಿಂದ ಬಗೆ ಹರಿಸಲಾಗಿದೆ ಎಂದು ಹೇಳಿದರು.

Next Story

RELATED STORIES