Top

ಮೈತ್ರಿ ಸರ್ಕಾರಕ್ಕೆ ಕಂಟಕ! ಬಿಜೆಪಿಗೆ ಜಾರಕಿಹೊಳಿ ಬ್ರದರ್ಸ್!

ಮೈತ್ರಿ ಸರ್ಕಾರಕ್ಕೆ ಕಂಟಕ! ಬಿಜೆಪಿಗೆ ಜಾರಕಿಹೊಳಿ ಬ್ರದರ್ಸ್!
X

ಬೆಳಗಾವಿ: ಬೆಳಗಾವಿಯಲ್ಲಿ ಪಿಎಲ್‌ಡಿ ಬ್ಯಾಂಕ್ ಎಲೆಕ್ಷನ್‌ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಬಣ ಗೆದ್ದ ಹಿನ್ನೆಲೆ, ರಮೇಶ್ ಜಾರಕಿಹೊಳಿ ಕೊಂಚ ಅಸಮಾಧಾನಗೊಂಡಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರಕ್ಕೆ ಕಂಟಕ ಕಾದಿದೆ ಎಂಬ ಸೂಚನೆ ನೀಡಿದ್ದಾರೆ.

ಜಾರಕಿಹೊಳಿ ಸಹೋದರರ ಅಸಮಾಧಾನ ಹಿನ್ನೆಲೆ, ಬಿಜೆಪಿ ಸರ್ಕಾರ ಜಾರಕಿಹೊಳಿ ಸಹೋದರರನ್ನು ತನ್ನತ್ತ ಸೆಳೆಯಲು ಮಾಸ್ಟರ್ ಪ್ಲಾನ್ ಮಾಡಿದೆ.ಒಳಗೊಳಗೆ ಆಪರೇಷನ್ ಕಮಲ ನಡೆದಿದ್ದು, ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಹುದ್ದೆ ನೀಡುವುದಾಗಿ ತನ್ನತ್ತ ಸೆಳೆಯಲು ಪ್ಲಾನ್ ಮಾಡಿದೆ.

ಈ ಬಗ್ಗೆ ಜಾರಕಿಹೊಳಿ ಬ್ರದರ್ಸ್ ಜೊತೆ ಶ್ರಿರಾಮುಲು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ದೆಹಲಿ ಬಿಜೆಪಿ ನಾಯಕರ ಜೊತೆಯೂ ರಮೇಶ್ ಜಾರಕಿಹೊಳಿ ಚರ್ಚೆ ನಡೆಸಿದ್ದಾರೆನ್ನಲಾಗಿದೆ. ಅಲ್ಲದೇ ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಸದ್ಯ ಬೀಗರಾಗಲು ಹೊರಟಿದ್ದು, ರಮೇಶ್ ಪುತ್ರನಿಗೆ ಶ್ರೀರಾಮುಲು ಪುತ್ರಿಯನ್ನು ತಂದುಕೊಳ್ಳುವ ಮಾತುಕತೆ ನಡೆದಿದೆ. ಇದರ ಬೆನ್ನಲ್ಲೇ ಶ್ರೀರಾಮುಲು ಡಿಸಿಎಂ ಬಗ್ಗೆಯೂ ಚರ್ಚೆ ನಡೆದಿದ್ದು, ರಮೇಶ್, ಸತೀಶ್ ಬಿಜೆಪಿ ಬರುವ ಸಾಧ್ಯತೆ ಹೆಚ್ಚಿದೆ.

Next Story

RELATED STORIES