Top

ಮಹದಾಯಿ ವಿವಾದ: ಕರ್ನಾಟಕಕ್ಕೆ ಸಿಕ್ಕಿದ್ದು 5.5 ಟಿಎಂಸಿ ಕುಡಿಯುವ ನೀರು!

ಮಹದಾಯಿ ವಿವಾದ: ಕರ್ನಾಟಕಕ್ಕೆ ಸಿಕ್ಕಿದ್ದು 5.5 ಟಿಎಂಸಿ ಕುಡಿಯುವ ನೀರು!
X

ಕರ್ನಾಟಕಕ್ಕೆ 5.5 ಟಿಎಂಸಿ ಕುಡಿಯುವ ನೀರಿನ ಪಾಲನ್ನು ನಿಗದಿಪಡಿಸಿ ಸುಪ್ರೀಂಕೋರ್ಟ್​ ಮಹತ್ವದ ಆದೇಶ ನೀಡಿದೆ. ಈ ಮೂಲಕ ತೀವ್ರ ಸಂಘರ್ಷಕ್ಕೆ ಕಾರಣವಾಗಿದ್ದ ಮೂರು ರಾಜ್ಯಗಳ ನಡುವಿನ ಮಹದಾಯಿ ವಿವಾದದಲ್ಲಿ ಕರ್ನಾಟಕಕ್ಕೆ ಸಮಾಧಾನಕರ ತೀರ್ಪು ಲಭಿಸಿದೆ.

ಕರ್ನಾಟಕ 36.5 ಟಿಎಂಸಿ ನೀರು ಕೇಳಿದ್ದರೆ ಸುಪ್ರೀಂಕೋರ್ಟ್ 13.7 ಟಿಎಂಸಿ ನೀರಿನ ಪಾಲು ನೀಡಿದೆ. ಇದರಲ್ಲಿ 5.5 ಟಿಎಂಸಿ ನೀರು ಕುಡಿಯಲು, 4 ಟಿಎಂಸಿ ನೀರು ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಕುಡಿಯವ ನೀರಿಗಾಗಿ, 1.2 ಟಿಎಂಸಿ ನೀರು ನಾಲೆಗಳಿಗೆ, ಮಲಪ್ರಭಾ ನಾಲೆಗೆ 4 ಟಿಎಂಸಿ ಹಾಗೂ 8.5 ಟಿಎಂಸಿ ನೀರು ವಿದ್ಯುತ್​ ಉತ್ಪಾದನೆಗೆ ಬಳಸಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ಸರಕಾರಗಳ ನಡುವೆ ಹಾಗೂ ಕೇಂದ್ರ ಹಾಗೂ ರಾಜ್ಯ ಸರಕಾರದ ನಡುವೆ ಭಾರೀ ಸಂಘರ್ಷಕ್ಕೆ ಕಾರಣವಾಗಿದ್ದ ಮಹದಾಯಿ ವಿವಾದ ಉತ್ತರ ಕರ್ನಾಟಕದ ಜನತೆಗೆ ಪೂರ್ಣ ತೃಪ್ತಿ ನೀಡದೇ ಇದ್ದರೂ ಸಮಾಧಾನ ತಂದಿರುವುದು ನಿಜ.

ಕರ್ನಾಟಕ ಕುಡಿಯುವ ನೀರಿಗಾಗಿ 7 ಟಿಎಂಸಿ ಹೆಚ್ಚುವರಿ ನೀರಿಗೆ ಬೇಡಿಕೆ ಇಟ್ಟಿದ್ದು, ಸುಪ್ರೀಂಕೋರ್ಟ್​ 1.6 ಟಿಸಿಎಂ ಕಡಿಮೆ ಅಂದರೆ 5.5 ಟಿಎಂಸಿ ನೀರು ಹರಿಸುವಂತೆ ಸೂಚಿಸಿದೆ. ಅಲ್ಲದೇ ನೀರಾವರಿಗೆ ಕೇಳಿದ ಪಾಲಿನಲ್ಲೂ ಕಡಿಮೆ ಮಾಡಿರುವುದು ಉತ್ತರ ಕರ್ನಾಟಕದ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ.

ಮೂಲಕ ಕುಡಿಯುವ ನೀರಿಗಾಗಿ ಕಳೆದ ಎರಡೂವರೆ ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಉತ್ತರ ಕರ್ನಾಟಕದ ಜನತೆಗೆ ಸಂಪೂರ್ಣ ಅಲ್ಲದೇ ಇದ್ದರೂ ಬಹುತೇಕ ಜಯ ದೊರೆತಿದ್ದು, ಸಮಾಧಾನ ಉಂಟಾಗಿದೆ.

ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಕುಡಿಯುವ ನೀರಿಗಾಗಿ 4 ಟಿಎಂಸಿ, ಮಹದಾಯಿ ವ್ಯಾಪ್ತಿಗೆ 1.6 ಟಿಎಂಸಿ ನೀರು ಹಂಚಿಕೆ ಮಾಡಿದೆ. 1.5 ನೀರು ನಾಲೆಗಳಿಗೆ ಹಾಗೂ 8.05 ಟಿಎಂಸಿ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

Next Story

RELATED STORIES