Top

ಉತ್ತರಕರ್ನಾಟಕದ ಸಮಸ್ಯೆಗಳ ಬಗೆಹರಿಸುವರೇ ಮುಖ್ಯಮಂತ್ರಿ ಹೆಚ್‌ಡಿಕೆ.?

ಉತ್ತರಕರ್ನಾಟಕದ ಸಮಸ್ಯೆಗಳ ಬಗೆಹರಿಸುವರೇ ಮುಖ್ಯಮಂತ್ರಿ ಹೆಚ್‌ಡಿಕೆ.?
X

ಹುಬ್ಬಳ್ಳಿ : ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಆದ್ರೆ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮುಂದೆ ಅನೇಕ ಸಮಸ್ಯೆಗಳ ಸರಮಾಲೆ ಇವೆ. ಅವುಗಳ ನಿವಾವರಣೆ ಈ ಕಡೆ ಪ್ರವಾಸದಲ್ಲಿದ್ದಾಗ ಮೊದಲು ಈ ಬಗ್ಗೆ ಪ್ರಸ್ತಾವನೆ ಮಾಡುತ್ತಿದ್ದರು. ಆದ್ದರಿಂದ ಈಗ ಎಚ್ಡಿಕೆ ಈ ಸಮಸ್ಯೆಗಳಿಗೆ ಯಾವ ರೀತಿ ಸ್ಪಂದನೆಯಾಗುತ್ತಾರೆ ಎಂಬ ಆಶಾಭಾವನೆ ಉತ್ತರ-ಕರ್ನಾಟಕ ಜನತೆಯಲ್ಲಿ ಕಾತರ ಹೆಚ್ಚಾಗಿದೆ.

ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಭಾಗದಲ್ಲಿ ಮನೆ ಮಾಡಿ ತಾವು ಸಿಎಂ ಆದರೆ ಅಲ್ಲಿನ ಸಮಸ್ಯೆಗಳಿಗೆ ಪ್ರಮಾಣಿಕವಾಗಿ ಸ್ಪಂದನೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಈಗ ಅವರು ಹೇಳಿದತೆ ಸಿಎಂ ಪಟ್ಟ ಏರಲು ಸಕಲ ಸಿದ್ಧತೆ ಸಹ ನಡೆದಿದೆ. ಇನ್ನೇನು ಇದ್ದರು ನುಡಿದಂತೆ ನಡೆಯಬೇಕು. ಉತ್ತರ ಕರ್ನಾಟಕದ ರೈತಾಪಿ ವರ್ಗಕ್ಕೆ ನೀರಾವರಿ ಯೋಜನೆಗಳಿಗೆ ಸೀಗಬೇಕಾದ ಸೌಲಭ್ಯಗಳು ಸರಿಯಾಗಿ ದೂರೆಯುತ್ತಿಲ್ಲ.

ಉಕ ಭಾಗದಲ್ಲಿ ಬರಗಾಲ ಹಾಗೂ ನೀರಿಗಾಗಿ ಹೋರಾಟಗಳು ಕೂಡ ನಡೆದಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಜನಪರ ಮತ್ತು ಜನ ಕಲ್ಯಾಣ ಯೋಜನೆಗಳಿಗೆ ಅನುದಾನವನ್ನು ಬಿಡುಗಡೆ ಮಾಡಿದರೂ ಕೂಡ ಈ ಯೋಜನೆಗಳು ಸರಿಯಾದ ರೀತಿಯಲ್ಲಿ ಅನುಷ್ಟಾನ ಆಗುವಲ್ಲಿ ಪದೇ ಪದೇ ವಿಫಲವಾಗಿವೆ. ಈ ಭಾಗದ ಜನತೆಯ ನಾಲ್ಕು ದಶಕಗಳ ಬೇಡಿಕೆಯಾದ ಕಳಸಾ ಬಂಡೂರಿ ಹಾಗೂ ಮಹದಾಯಿ ಮತ್ತು ಕೃಷ್ಣ ಬಿ ಸ್ಕೀಂ, ತುಂಗಭದ್ರಾ, ಮಲ್ಲಪ್ರಭಾ ಜಲಾಶಯಗಳ ಹೂಳು ಎತ್ತುವುದು ಸೇರಿದಂತೆ ಹಲವಾರು ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಅವುಗಳನ್ನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಕುಮಾರಸ್ವಾಮಿ ಜಾರಿಗೆ ತರಬೇಕಾಗಿದೆ.

ಕಳೆದ 4 ದಶಕಗಳ ಕಾಲ ಕಳಸಾ ಬಂಡೂರಿ ಮಹದಾಯಿ ಯೋಜನೆ ಜಾರಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯಕ್ಕೆಷ್ಟೇ ಬಳಸಿಕೊಂಡಿದ್ದು ಬಿಟ್ಟರೇ ಎಂಬ ಪ್ರಶ್ನೆ ಕಾಡುತಿದೆ. ಈ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಹುಡುಕುವ ಮಾರ್ಗ ಯಾವ ಪಕ್ಷವು ಮಾಡಿಲ್ಲ ಎಂಬುವುದು ಸಾರ್ವಜನಿಜರ ಅಸಮಾಧಾನವಾಗಿದೆ. ಇನ್ನು ಮುಂದೆ ಆದರೂ ಇಲ್ಲಿನ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸಬೇಕು ಎಂದು ಈ ಭಾಗದ ಜನರ ಒತ್ತಾಯವಾಗಿದೆ.

ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆ, ಟ್ರಕ್ ಟ್ರಮಿನಲ್, ಸಮಗ್ರ ನೀರಾವರಿ ಯೋಜನೆ ಜಾರಿ, ಮಹದಾಯಿ ಸೇರಿದಂತೆ ಉಕ ಭಾಗದ ಜ್ವಲಂತ ಸಮಸ್ಯೆಗಳು ಯಾವುದೇ ಪಕ್ಷಗಳ ನಾಯಕರು ಅಷ್ಟೊಂದು ಗಂಬೀರವಾಗಿ ತೆಗೆದುಕೊಳ್ಳಲಿಲ್ಲ. ಕೇವಲ ಭರವಸೆ ನೀಡುವದಲ್ಲಿ ಕಾಲಹರಣ ಹಾಕಿದರು. ಈಗ ಬಂದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಸಿಎಂ ಎಚ್.ಡಿ.ಕುಮಾರಸ್ವಾಮಿವರು ಈ ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳನ್ನ ಯಾವ ರೀತಿ ಪರಿಹರಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.

ವರದಿ :-ಯಲ್ಲಪ್ಪ ಸೋಲಾರಗೊಪ್ಪ, TV5 ಹುಬ್ಬಳ್ಳಿ

Next Story

RELATED STORIES